Uncategorized

ಅಷ್ಟು ದೊಡ್ಡ ಬಂಡೆಗೆ ಎಷ್ಟೇ ಜೋರಾಗಿ ತಲೆ ಜಜ್ಜಿದರೂ ಗಾಯವಾಗೋದಿಲ್ಲ ಏಕೆ?ದೇವರ ಮಹಿಮೆಯೇ? ಏನಿದು ವಿಶಿಷ್ಟ ಜಾತ್ರೆ?

ನ್ಯೂಸ್ ನಾಟೌಟ್ :ಕೆಲವೊಂದು ಸಲ ವಿಶಿಷ್ಟ ಆಚರಣೆಗಳು,ಜಾತ್ರೆಗಳು ನಮ್ಮನ್ನು ಬೆರಗುಗೊಳಿಸುವಂತೆ ಮಾಡುತ್ತವೆ.ಪ್ರತಿಯೊಂದು ಊರಿನಲ್ಲೂ ಸಂಪ್ರದಾಯ,ಆಚರಣೆಗಳು ವಿಭಿನ್ನವಾಗಿರುತ್ತೆ.ಅನಾದಿ ಕಾಲದಿಂದಲೂ ನಡೆಸಿಕೊಂಡು ಬರುವ ಆ ಆಚರಣೆಗಳನ್ನು ಯಾಕೆ ಮಾಡುತ್ತಾರೆ?ಹೇಗೆ ಮಾಡುತ್ತಾರೆ ಅನ್ನುವ ಕುತೂಹಲಕಾರಿ ವಿಚಾರಗಳ ಬಗ್ಗೆ ಜನ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ.

ಹೌದು, ಇಲ್ಲೊಂದು ಕಡೆ ನಡೆಯುವ ವಿಭಿನ್ನ ಆಚರಣೆ ಬಗ್ಗೆ ತಿಳಿದುಕೊಳ್ಳಲೇ ಬೇಕು. ಬಂಡೆಗೆ (Rock) ತಲೆ ಜಜ್ಜುವ ವಿಶಿಷ್ಟ ಆಚರಣೆಯೊಂದು ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆಯುತ್ತದೆ. ಇಲ್ಲಿ ಭಕ್ತರು ಓಡೋಡಿ ಬಂದು ಕಲ್ಲಿಗೆ ಜೋರಾಗಿ ತಲೆ ಜಜ್ಜಿ ದೇವರಿಗೆ ನಮಸ್ಕಾರ ಮಾಡುತ್ತಾರೆ. ಈ ವಿಚಿತ್ರ ಜಾತ್ರೆ ವಿಜಯಪುರ ಜಿಲ್ಲೆಯ ನಿಡಗುಂದಿ (Nidgundi) ತಾಲೂಕಿನ ಗಣಿ ಗ್ರಾಮದಲ್ಲಿ ನಡೆಯುತ್ತದೆ.

ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆ (Fair) ವೇಳೆ ಈ ರೀತಿಯ ವಿಶಿಷ್ಟ ಆಚರಣೆ ನಡೆಯುತ್ತದೆ.ಭಕ್ತರು ಒಟ್ಟು ಮೂರು ಸಲ ಬಂಡೆಗೆ ತಲೆಯನ್ನು ಜಜ್ಜಿ ನಮಸ್ಕಾರ ಮಾಡುವ ಪದ್ಧತಿ ಇಲ್ಲಿದೆ.ನೂರಾರು ಭಕ್ತರಿಂದ ನಡೆಯುವ ಈ ವಿಶಿಷ್ಟ ಆಚರಣೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿಶೇಷ ಎಂದರೆ ಕಲ್ಲಿಗೆ ಎಷ್ಟೇ ಜೋರಾಗಿ ತಲೆ ಜಜ್ಜಿಕೊಂಡರೂ ಯಾರಿಗೂ ಇದುವರೆಗೂ ಒಂದು ಸಣ್ಣಪುಟ್ಟ ಗಾಯ ಕೂಡ ಆಗಿಲ್ಲ.

ಸೋಮೇಶ್ವರ ದೇವರ ಶಕ್ತಿಯಿಂದ ಯಾವುದೇ ಅಪಾಯ ಆಗುವುದಿಲ್ಲ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಬಳಿಕ ಈ ವಿಶಿಷ್ಟ ಆಚರಣೆಯ ಜಾತ್ರೆ ನಡೆಯುತ್ತದೆ.

Related posts

ಸೋನು ಗೌಡ ದತ್ತು ಪಡೆದ ಮಗುವಿನ ಹಿನ್ನೆಲೆಯೇನು ಗೊತ್ತಾ..? ವಿಚಾರಣೆ ವೇಳೆ ಹೊರಬಂತು ಸತ್ಯ!!ನಿಮ್ಗೂ ಶಾಕ್ ಆಗುತ್ತೆ..

ಪೆರಾಜೆ :ಶಾಸಕ ಪೊನ್ನಣ್ಣರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಜನ ಸ್ಪಂದನಾ ಕಾರ್ಯಕ್ರಮ, ಗ್ರಾಮಸ್ಥರ ಅಹವಾಲು ಸ್ವೀಕಾರ..!

ದಲಿತ ಸ್ವಾಮೀಜಿಯ ಎಂಜಲು ತಿಂದ ಕಾಂಗ್ರೆಸ್ ಶಾಸಕ