ಕೊಡಗು

ಮಡಿಕೇರಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ಏಕಾಏಕಿ ಕಾಡಾನೆ ದಾಳಿ, ಗಂಭೀರ ಗಾಯಗೊಂಡ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ಕಾಡಾನೆಯೊಂದು ದಾಳಿ ಮಾಡಿದೆ. ಸುಂಟಿಕೊಪ್ಪದಲ್ಲಿ ನಡೆದ ದುರ್ಘಟನೆಯ ವೇಳೆ ನಾಲ್ವರು ಮಹಿಳೆಯರು ಬಚಾವ್ ಆಗಿದ್ದಾರೆ.

ಆದರೆ ಸುನಿತಾ (32 ವರ್ಷ) ಅನ್ನುವವರು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸುಂಟಿಕೊಪ್ಪದ ಪ್ರಾಥಮಿ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿ ಜಿಲ್ಲಾಸ್ಪತ್ರೆ ಕರೆದುಕೊಂಡು ಬರಲಾಗಿದೆ. ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಆರ್ ಆರ್ ಟಿ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಡಿಗೆ ಬಂದ ಕಾಡಾನೆಯನ್ನು ಕಾಡಿಗೆ ಅಟ್ಟು ಕೆಲಸವನ್ನು ಈಗ ಅರಣ್ಯಾಧಿಕಾರಿಗಳು ಮಾಡುತ್ತಿದ್ದಾರೆ.

Related posts

ಹಾಕತ್ತೂರು ವಿ.ಎಸ್.ಎಸ್.ಎನ್ ನ ನೂತನ ನಿರ್ದೇಶಕರಿಗೆ ಕೆ. ಜಿ.ಬೋಪಯ್ಯರಿಂದ ಸನ್ಮಾನ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವಶದಲ್ಲಿದ್ದ ಸಹಕಾರ ಸಂಘ ಬಿಜೆಪಿ ತೆಕ್ಕೆಗೆ!

ಮಡಿಕೇರಿ: ಜಮೀನಿನಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಕಾಡಿಗಟ್ಟುವ ಪ್ಲ್ಯಾನ್..! ,ಆ.19 , 20ರಂದು ಸಾರ್ವಜನಿಕರು ಎಚ್ಚರವಾಗಿರುವಂತೆ ಅರಣ್ಯ ಇಲಾಖೆ ಸೂಚಿಸಿದ್ಯಾಕೆ ?

ಕಲ್ಲುಗುಂಡಿ: ಬಿಸಿಲನ್ನೂ ಲೆಕ್ಕಿಸದೆ 15 ದಿನದ ನವಜಾತ ಶಿಶುವಿನೊಂದಿಗೆ ಬಂದು ಮತದಾನ ಮಾಡಿದ ಪತ್ರಕರ್ತೆ, ಸಿಸೇರಿಯನ್ ನೋವಿನಲ್ಲಿದ್ದರೂ ಬಾಣಂತಿಯ ಸೌಜನ್ಯಯುತ ನಡೆ..!