ಕರಾವಳಿ

ಮೀನು ಹಿಡಿಯಲೆಂದು ಹೊಳೆಗಿಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತ್ಯು,ಮುಗಿಲು ಮುಟ್ಟಿದ ಹೆತ್ತವರ ರೋದನ

ನ್ಯೂಸ್ ನಾಟೌಟ್: ಮೀನು ಹಿಡಿಯಲೆಂದು ಹೋದ ವಿದ್ಯಾರ್ಥಿಯೋರ್ವ ನೇತ್ರಾವತಿ ನದಿಯ ಸನ್ಯಾಸಿ ಕಯ ಎಂಬಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಭವಿಸಿದೆ.

ಬಜತ್ತೂರು ಗ್ರಾಮದ ಪೆಲತ್ರೋಡಿ ಮನೆ ನಿವಾಸಿ ಓಡಿಯಪ್ಪ ಎಂಬವರ ಪುತ್ರ ರೂಪೇಶ್(17) ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕ. ಈತ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಎನ್ನಲಾಗಿದೆ.

ಜೊತೆಗಿದ್ದ ಸ್ನೇಹಿತ ಆತನನ್ನು ನೀರಿನಿಂದ ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿ ಬದುಕಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಶನಿವಾರ ಇಳಂತಿಲ ಗ್ರಾಮದ ಕಟ್ಟೆಚ್ಚಾರ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಈತ ತನ್ನ ಸಂಬಂಧಿಯೊಂದಿಗೆ ರವಿವಾರ ನೇತ್ರಾವತಿ ನದಿಯ ಸನ್ಯಾಸಿ ಕಯದಲ್ಲಿ ಮೀನು ಹಿಡಿಯಲೆಂದು ಹೋದಾತ ಈಜು ಬಾರದೆ ನೀರಿನಲ್ಲಿ ಮುಳುಗಿ ಅಸ್ವಸ್ಥನಾಗಿದ್ದ ಎನ್ನಲಾಗಿದೆ.

ಈತ ಕ್ರೀಡೆಯಲ್ಲಿ ಬೆಳಗುತ್ತಿದ್ದ ಪ್ರತಿಭೆ.ಕಬಡ್ಡಿಯಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ವಿದ್ಯಾರ್ಥಿ. ಈತ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಮೃತರ ತಾಯಿ ಗೋಪಿ ನೀಡಿದ ದೂರನ್ನು ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Related posts

ಸುಬ್ರಹ್ಮಣ್ಯ: ವಿದ್ಯುತ್‌ ದುರಸ್ಥಿ ವೇಳೆ ಶಾಕ್ ತಗುಲಿ ಕೊನೆಯುಸಿರೆಳೆದ ಲೈನ್ ಮ್ಯಾನ್..!ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೋಲಿಸರು ಭೇಟಿ-ಪರಿಶೀಲನೆ

ಚಪ್ಪಲಿಯಲ್ಲಿ ಬಂಗಾರದ ಬಿಸ್ಕೆಟ್ ! ಕಸ್ಟಮ್ಸ್ ಅಧಿಕಾರಿಗಳ ಅತಿಥಿಯಾದ ಪ್ರಯಾಣಿಕ

ಗುತ್ತಿಗಾರು:ಅಮರ ಯೋಗ ತರಬೇತಿ ಶಿಬಿರ ಉದ್ಘಾಟನೆ,ಯೋಗಭ್ಯಾಸದಲ್ಲಿ ತೊಡಗಿದ ಮಕ್ಕಳು