ಕರಾವಳಿ

ಶಾಲಾ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ,16 ವರ್ಷದ ಬಾಲಕಿ ಈ ನಿರ್ಧಾರ ತೆಗೆದು ಕೊಂಡಿದ್ದೇಕೆ?

ನ್ಯೂಸ್ ನಾಟೌಟ್ : ಶಾಲಾ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪ ಗೇರುಕಟ್ಟೆ ಎಂಬಲ್ಲಿ ನಡೆದಿದೆ.ಮೃತ ವಿದ್ಯಾರ್ಥಿನಿಯನ್ನು ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಅಶಿಫಾ (16 ವ) ಎಂದು ಗುರುತಿಸಲಾಗಿದೆ.ಈಕೆ ಕುಪ್ಪೆಟ್ಟಿ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರಿ.

ಘಟನೆ ವಿವರ:

ಆಶಿಫಾ ಗೇರುಕಟ್ಟೆ ಖಾಸಗಿ ಪ್ರೌಢ ಶಾಲೆಯಲ್ಲಿ ಓದುತ್ತಿದ್ದಳು. ಶಾಲೆಗೆ ಹೋಗುವ ವೇಳೆ ಅಲ್ಲೇ ಪಕ್ಕದಲ್ಲಿರುವ ಮನೆಯೊಂದಕ್ಕೆ ಶೌಚಾಲಯಕ್ಕೆ ತೆರಳಿದ್ದಾಳೆ.ತುಂಬಾ ಸಮಯ ಕಳೆದರೂ ಮರಳಿ ಬಾರದೇ ಇರುವುದನ್ನು ಮನಗಂಡ ಮನೆಯವರು, ಶೌಚಾಲಯದ ಬಾಗಿಲು ಮುರಿದು ನೋಡಿದಾಗ ವಿದ್ಯಾರ್ಥಿನಿ ನರಳಾಡುತ್ತಿರುವುದು ಕಂಡು ಬಂತು.ಕೂಡಲೇ ಆಕೆಯನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯವ ವೇಳೆ ದಾರಿ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿದ್ಯಾರ್ಥಿನಿ ಸಾವಿನ ಕಾರಣದ ಬಗ್ಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಸುಳ್ಯ: ಕಾರು-ಪಿಕಪ್ ನಡುವೆ ಅಪಘಾತ, ಕಾರಿಗೆ ಅಲ್ಪ ಪ್ರಮಾಣದ ಹಾನಿ

ಕನಕಮಜಲಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ಭಾರಿ ಟ್ರಾಫಿಕ್ ಜಾಮ್ , ತುರ್ತು ಪರಿಸ್ಥಿತಿಯಲ್ಲಿದ್ದ ಆಂಬ್ಯುಲೆನ್ಸ್ ನಲ್ಲಿದ್ದವರ ಪರದಾಟ

ಪ್ರವೀಣ್ ಹತ್ಯೆ ಪ್ರಕರಣ: ಮತ್ತೋರ್ವ ಅರೆಸ್ಟ್