ದೇಶ-ಪ್ರಪಂಚ

ವಿಮಾನ ಪ್ರಯಾಣದ ವೇಳೆ ತುರ್ತು ನಿರ್ಗಮನ ದ್ವಾರವನ್ನು ತೆರೆದ ಪ್ರಯಾಣಿಕ!

ನ್ಯೂಸ್ ನಾಟೌಟ್: ವಿಮಾನ ಪ್ರಯಾಣದ ವೇಳೆ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರವನ್ನು ತೆರೆಯಲು ಪ್ರಯತ್ನಿಸಿದ ಘಟನೆ ಯುನೈಟೆಡ್ ಏರ್‌ಲೈನ್ ವಿಮಾನದಲ್ಲಿ ನಡೆದಿದೆ.

ಫ್ರಾನ್ಸಿಸ್ಕೊ ಟೊರೆಸ್ ಎಂಬಾತ ಲಾಸ್ ಏಂಜಲೀಸ್‌ನಿಂದ ಬೋಸ್ಟನ್‌ಗೆ ಪ್ರಯಾಣಿಸುತ್ತಿದ್ದ. ಈ ವೇಳೆ ವಿಮಾನ ಲ್ಯಾಂಡ್ ಆಗಲು ಇನ್ನೇನು ಕೇವಲ 45 ನಿಮಿಷಗಳು ಬಾಕಿ ಇರುವಾಗ ಟೊರೆಸ್ ತುರ್ತು ನಿರ್ಗಮನ ದ್ವಾರವನ್ನುತೆರೆಯುತ್ತಾನೆ. ಈ ಸಂದರ್ಭ ಎಚ್ಚರಿಕೆಯ ಶಬ್ದ ಕೇಳಿ ಬಂತು. ತಕ್ಷಣ ಗಗನಸಖಿಯರು ಆತನನ್ನು ತಡೆಯಲು ಮುಂದಾದಾಗ ಅವರ ಕುತ್ತಿಗೆಗೆ ಆಯುಧದಿಂದ ಇರಿಯಲು ಯತ್ನಿಸಿದ್ದಾನೆ.

ಘಟನೆ ಸಂಬಂಧಿಸಿದಂತೆ ಟೊರೆಸ್‌ನನ್ನು ಬೋಸ್ಟನ್ ಲೋಗನ್‌ನನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಸದ್ಯ ಈತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related posts

97 ಸಾವಿರ ಭಾರತೀಯರನ್ನು ಬಂಧಿಸಿದ್ದೇಕೆ ಅಮೆರಿಕ..? 730 ಮಂದಿ ಅನಾಥ ಮಕ್ಕಳನ್ನೂ ಸೆರೆ ಹಿಡಿದಿದ್ಯಾಕೆ ದೊಡ್ಡಣ್ಣ? ಏನಿದು ಪ್ರಕರಣ?

ಕಡಬ: ಮದುವೆಗೆ ಉಡುಗೊರೆ ತರಬೇಡಿ ಮೋದಿಗೆ ಮತ ನೀಡಿ, ವೈರಲ್ ಆಗುತ್ತಿದೆ ಕರಾವಳಿಯ ಮದುವೆ ಆಮಂತ್ರಣ, ನಾಳೆ(ಎ.18) ಮದುವೆ

ಪುರಾತನ ದೇವಾಲಯದಲ್ಲಿ 65 ಚಿನ್ನದ ನಾಣ್ಯಗಳು ಪತ್ತೆ!