ಕರಾವಳಿ

ಹಾವು ಹಿಡಿಯುವ ವೇಳೆ ಕಾಲಿಗೆ ಕಚ್ಚಿದ ವಿಷ ನಾಗರ,ಗಂಭೀರ ಸ್ಥಿತಿಯಲ್ಲಿ ವ್ಯಕ್ತಿ ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್ : ಹಾವು ರಕ್ಷಣೆ ವೇಳೆ ನಾಗರ ಹಾವು ಕಚ್ಚಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ಸ್ನೇಕ್ ಅಶೋಕ್ ಲಾಯಿಲ ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯಾಗಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ನೇಕ್ ಅಶೋಕ್ ಲಾಯಿಲ ಅವರು ಹಾವನ್ನು ನಾಜೂಕಾಗಿ ಹಿಡಿಯುವುದರಲ್ಲಿ ನಿಸ್ಸೀಮರು.ಹೀಗಾಗಿ ಮನೆಯೊಂದಕ್ಕೆ ಬಂದಿದ್ದ ನಾಗರಹಾವನ್ನು ರಕ್ಷಣೆ ಮಾಡಲೆಂದು ಹೊರಟಿದ್ದರು. ಈ ವೇಳೆ ನಾಗರ ಹಾವು ಕಾಲಿಗೆ ಕಚ್ಚಿದೆ.ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಳಿಯಲ್ಲಿ ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಮನೆಯಲ್ಲಿ ನಾಗರ ಹಾವು ಇರುವ ಬಗ್ಗೆ ಮಾಹಿತಿ ತಿಳಿದುಬಂತು. ಅದರಂತೆ ರಕ್ಷಣೆ ಮಾಡಲು ಸ್ನೇಕ್ ಅಶೋಕ್ ಲಾಯಿಲ ಹಾವನ್ನು ಹಿಡಿಯುವ ವೇಳೆ ಬಲ ಕಾಲಿಗೆ ನಾಗರ ಹಾವು ಕಚ್ಚಿದೆ.

ಕೂಡಲೇ ಉಜಿರೆ ಬೆನಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರೂ ಪರೀಕ್ಷಿಸಿದ ವೈದ್ಯರು ಮಂಗಳೂರು ಆಸ್ಪತ್ರೆಗೆ ರವಾನಿಸಲು ಸೂಚಿಸಿದ್ದಾರೆ. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಬಾ ಅಂಬುಲೆನ್ಸ್ ಚಾಲಕ ಜಲೀಲ್ ಮತ್ತು ಪ್ರತೀಕ್ ಕೋಟ್ಯಾನ್ ತಕ್ಷಣ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.

ಸ್ನೇಕ್ ಅಶೋಕ್ ಲಾಯಿಲ ಗಂಭೀರ ಸ್ಥಿತಿಯಲ್ಲಿದ್ದು ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಕ್ ಅಶೋಕ್ ಅವರಿಗೆ ಈ ಮೊದಲು ನಾಗರ ಹಾವು ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರಸಿದ್ಧ ಹಾವು ರಕ್ಷಕರಲ್ಲಿ ಸ್ನೇಕ್ ಅಶೋಕ್ ಲಾಯಿಲ ಒಬ್ಬರಾಗಿದ್ದು,ಬೆಳ್ತಂಗಡಿ ಪರಿಸರ ಭಾಗದಲ್ಲಿ ಭಾರಿ ಜನಮನ್ನಣೆಗೂ ಪಾತ್ರರಾದವರು.

Related posts

ಕಲ್ಲಡ್ಕ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು! ಕಾರಣ ನಿಗೂಢ!

ತಿರುಪತಿಯಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 3 ಕಿ.ಮೀ.ವರೆಗೆ ಸಾಲು..! ಇಲ್ಲಿದೆ ಸಂಪೂರ್ಣ ಮಾಹಿತಿ

ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ: 24 ಗಂಟೆಯಲ್ಲಿ ಬೆಳ್ಳಾರೆ ಬಂದ್ ?