ಕರಾವಳಿಕ್ರೈಂ

ಉಳ್ಳಾಲ: ಪುಟ್ಟ ಬಾಲಕಿ ಮೇಲೆ 70ರ ಹರೆಯದ ಮುದುಕನಿಂದ ಲೈಂಗಿಕ ಕಿರುಕುಳ..! ಆರೋಪಿಯನ್ನು ಹಿಡಿದು ಜೈಲಿಗಟ್ಟಿದ್ದ ಕೊಣಾಜೆ ಪೊಲೀಸರು

ನ್ಯೂಸ್‌ ನಾಟೌಟ್‌: ಮೂರರ ಹರೆಯದ ಪುಟ್ಟ ಬಾಲಕಿಯ ಮೇಲೆ 70ರ ಹರೆಯದ ವೃದ್ಧನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ಉಳ್ಳಾಲ ತಾಲೂಕಿನ ಬಾಳೆಪುಣಿ ಎಂಬಲ್ಲಿ ನಡೆದಿದೆ. ಆರೋಪಿಯನ್ನು ಮೂಲತಃ ಪುತ್ತೂರು ನಿವಾಸಿ, ಪ್ರಸ್ತುತ ಮುದುಂಗಾರುಕಟ್ಟೆಯಲ್ಲಿ ವಾಸವಾಗಿರುವ ಅಬ್ದುಲ್ಲಾ (70) ಎಂದು ಗುರುತಿಸಲಾಗಿದೆ.

ಉಳ್ಳಾಲ ತಾಲೂಕಿನ ಬಾಳೆಪುಣಿ ಬಳಿಯ ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದ ಮೂರರ ಹರೆಯದ ಬಾಲಕಿಯ ಮೇಲೆ ಅಬ್ದುಲ್ಲಾ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಸ್ವಸ್ಥಗೊಂಡ ಮಗುವನ್ನು ಗಮನಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಬಾಲಕಿಯ ತಾಯಿ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related posts

ಇಚ್ಚೆಯಂತೆ ಹೊಲಿಯದ ರವಿಕೆ: ಮನನೊಂದು ಮಹಿಳೆ ಆತ್ಮಹತ್ಯೆ

ಮಾಜಿ ಸಚಿವ ಹೆಚ್.ಡಿ ರೇವಣ್ಣನಿಗೆ ನ್ಯಾಯಂಗ ಬಂಧನ, ಮುಂದಿನ 7 ದಿನ ಜೈಲುವಾಸ

ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯ ಮಧ್ಯೆ ಮಲಗಿದ್ದ ವ್ಯಕ್ತಿ..! ಆತನನ್ನು ಬಂಧಿಸಿದ ಪೊಲೀಸರು..! ಇಲ್ಲಿದೆ ವೈರಲ್ ವಿಡಿಯೋ