ಕರಾವಳಿ

ಉಪ್ಪಿನಂಗಡಿ:ವಾಣಿಜ್ಯ ಮಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಅವಘಡ, ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರಿಂದ ಬೆಂಕಿ ನಂದಿಸಲು ಹರಸಾಹಸ

ನ್ಯೂಸ್ ನಾಟೌಟ್ : ಉಪ್ಪಿನಂಗಡಿಯಲ್ಲಿರುವ ಪೃಥ್ವಿ ವಾಣಿಜ್ಯ ಮಳಿಗೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸ್ಥಳೀಯರ ಸಮಯಪ್ರಜ್ಞೆಯಿಂದ ಮುಂದೆ ಸಂಭವಿಸಬಹುದಾದ ದೊಡ್ಡ ದುರಂತವನ್ನೇ ತಪ್ಪಿಸಿರುವುದಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ವಾಣಿಜ್ಯ ಮಳಿಗೆಯ ವಿದ್ಯುತ್ ಮೀಟರ್ ಬೋರ್ಡ್ ಗಳಿರುವ ಎರಡು ಕೇಂದ್ರಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಅಲ್ಲೇ ಸಮೀಪದಲ್ಲಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿದ್ದಾರೆ. ಫೋನ್ ಮೂಲಕ ಎಲ್ಲರಿಗೂ ಮಾಹಿತಿ ರವಾನೆಯಾಯಿತು. ಕೂಡಲೇ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿತೆನ್ನಲಾಗಿದೆ.

Related posts

ಮರ್ಕಂಜ: ನಾಪತ್ತೆಯಾಗಿರುವ ವಿವಾಹಿತ ಮಹಿಳೆಗಾಗಿ ಬಾವಿಯೊಳಗೆ ಬಿದ್ದಿರುವ ಮಣ್ಣು ಅಗೆದು ಹುಡುಕಾಟ, ತರ್ಕಕ್ಕೆ ನಿಲುಕದ ಗೃಹಿಣಿಯ ನಿಗೂಢ ನಾಪತ್ತೆ ಪ್ರಕರಣ

ಮಂಡೆಕೋಲು : ಪರಿಸರ ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮ

ಬಸ್‌ ಸ್ಟ್ಯಾಂಡ್‌ನಲ್ಲಿ ನವಜಾತ ಶಿಶುವನ್ನು ಬಿಟ್ಟು ದಂಪತಿ ಪರಾರಿ..!