ದೇಶ-ಪ್ರಪಂಚ

ಕ್ಯಾಮರಾಗೆ ಪೋಸ್ ಕೊಡ್ತಿದ್ದ ರೂಪದರ್ಶಿ..!ಆಕೆಯ ಬಟ್ಟೆಯನ್ನೇ ಬಿಚ್ಚಿ ಕಚ್ಚಿ ಎಳೆದೊಯ್ದ ಶ್ವಾನ..!ವಿಡಿಯೋ ವೈರಲ್

ನ್ಯೂಸ್ ನಾಟೌಟ್ :ಸಾಕುಪ್ರಾಣಿಗಳು ಮನೆಯಲ್ಲಿದ್ದರೆ ಕೆಲವೊಮ್ಮೆ ಟೈಂಪಾಸ್ ಆಗೋದೇ ಗೊತ್ತಾಗೊದಿಲ್ಲ.ಅದರಲ್ಲೂ ಶ್ವಾನಗಳು ಇನ್ನೂ ಮನರಂಜನೆಯನ್ನು ನೀಡುತ್ತಿರುತ್ತವೆ.ಇಂತಹ ಮುದ್ದಾದ ಶ್ವಾನಗಳ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತದೆ. ಅದೇ ರೀತಿ ಈಗ ಇಲ್ಲೊಂದು ಶ್ವಾನದ ವಿಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಹೌದು,ವೀಡಿಯೋದಲ್ಲಿ ಶ್ವಾನ ಮಾಡಿರುವ ಕಿತಾಪತಿ ಕಂಡು ಮಾಡೆಲ್ ಒಬ್ಬಳು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.ಇನ್ಸ್ಟಾದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ  ಕಟ್ಟಡವೊಂದರ ಎದುರು ರಸ್ತೆಯಲ್ಲಿ ಮಾಡೆಲ್‌ಗಳಿಬ್ಬರೂ ಫೋಟೋಗಳಿಗೆ ಫೋಸ್‌ ನೀಡುತ್ತಿದ್ದಾರೆ.  ಕಪ್ಪು ಹಾಗೂ ಬಿಳಿ ಬಣ್ಣದ ಲಾಂಗ್ ಗೌನ್‌ನಂತಹ ಧಿರಿಸು ಧರಿಸಿರುವ ಮಾಡೆಲ್‌ಗಳು ಫೋಟೋಗೆ ಫೋಸ್ ನೀಡ್ತಾ ನಿಂತಿದ್ದು, ಈ ವೇಳೆಗಾಗಲೇ ಅಲ್ಲಿಗೆ ಬಂದ ಶ್ವಾನ ಬಿಳಿ ಬಣ್ಣದ ಬಟ್ಟೆ ಧರಿಸಿದ ಯುವತಿಯ ಬಟ್ಟೆಯನ್ನು  ಕಚ್ಚಿ ಎಳೆದುಕೊಂಡು ಅಲ್ಲಿಂದ ಓಡಲು ಶುರು ಮಾಡಲಾರಂಭಿಸಿದೆ.

ಇದನ್ನು ಒಂಚೂರು ನಿರೀಕ್ಷಿಸದ ಮಾಡೆಲ್ ಇದನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ.ದಿಢೀರ್‌ ಆದ ಈ ಬೆಳವಣಿಗೆಯಿಂದ ಗಾಬರಿಯಾದ ಆ ಮಾಡೆಲ್ ನಾಯಿ ಹಿಂದೆಯೇ ಓಡಲು ಶುರು ಮಾಡಿದ್ದಾಳೆ. ಟವೆಲ್‌ನಂತೆ ಈ ಬಟ್ಟೆ ಇದ್ದು, ನಾಯಿ ಎಳೆದುಕೊಂಡು ಹೋದ ಕೂಡಲೇ ಯುವತಿ ಒಳ ಉಡುಪಿನೊಂದಿಗೆ ನಾಯಿಯ ಹಿಂದೆ ಓಡುತ್ತಿದ್ದರೆ, ಆಕೆಯ ಜೊತೆಗೆ ನಿಂತ ಯುವತಿ ಕೂಡ ಶಾಕ್‌ಗೆ ಒಳಗಾಗಿದ್ದು, ನಂತರ ಆಕೆಯೂ ನಗಲು ಶುರು ಮಾಡುತ್ತಾಳೆ.

ಸದ್ಯ ಈ ವಿಡಿಯೋ ಸಕತ್ ವೈರಲ್ ಆಗಿದೆ.ಈ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದು,ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ದಯವಿಟ್ಟು ಮುಂದಿನ ಸಲ ಈ ರೀತಿ ಕರ್ಟನ್‌ಗಳನ್ನು ಧರಿಸದಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ರೀತಿ ನಾಯಿಗೆ ತರಬೇತಿ ನೀಡುವುದು ಹೇಗೆ ಎಂದು ತುಂಟತನದಿಂದ ಪ್ರಶ್ನಿಸಿದ್ದಾರೆ. ಈ ನಾಯಿಯನ್ನು ಅಲ್ಲಿಗೆ ಕರೆತಂದವರು ಯಾರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.  ನಾಯಿಗೆ ಚೆನ್ನಾಗಿ ತರಬೇತಿ ನೀಡಲಾಗಿದ್ದು, ಇದೆಲ್ಲಾ ರಷ್ಯಾದಲ್ಲಿ ಸಾಮಾನ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.ಒಟ್ಟಿನಲ್ಲಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

https://www.instagram.com/p/Cz9k_NLy5fK/?utm_source=ig_embed&utm_campaign=embed_video_watch_again

https://www.instagram.com/p/Cz9k_NLy5fK/?utm_source=ig_embed&utm_campaign=embed_video_watch_again

Related posts

ಮೋದಿ V/s ದೀದಿ ಡ್ಯಾನ್ಸ್‌ ವಿಡಿಯೋ ವೈರಲ್..! ಮೋದಿ ಪ್ರತಿಕ್ರಿಯೆ ಹೇಗಿತ್ತು..? ಇಲ್ಲಿದೆ ವೈರಲ್ ವಿಡಿಯೋ

ಜನನಿಬಿಡ ರಸ್ತೆಯಲ್ಲಿ ಬೆತ್ತಲೆಯಾಗಿ ಓಡಾಡಿದ ಮಹಿಳೆ..! ವಿಡಿಯೋ ವೈರಲ್..! ತನಿಖೆ ನಡೆಸುತ್ತಿರುವ ಪೊಲೀಸರು..!

ಬಟ್ಟೆ ಅಂಗಡಿಯಲ್ಲಿ ಹೆಂಡ್ತಿಗೆ ಸೀರೆ ಇಷ್ಟವಾಗಿಲ್ಲವೆಂದು ಗಂಡ ಮಾಡಿದ್ದೇನು ಗೊತ್ತಾ? ಅಂಗಡಿ ಮಾಲೀಕನಿಗೆ ಬಾಸುಂಡೆ ಬರೋ ಥರ ರಪರಪನೇ ಬಾರಿಸಿ ಮನೆ ಕಡೆ ಹೊರಟ..!ಮುಂದೇನಾಯ್ತು ನೋಡಿ..