ಕರಾವಳಿಸುಳ್ಯ

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಹಾವು, ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ಕಂದಮ್ಮ ಮೃತ್ಯು

ನ್ಯೂಸ್ ನಾಟೌಟ್ : ನಾಲ್ಕು ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.ಈ ಘಟನೆ ಮುರಿಚೂರ್ ಪಲ್ಲಿಯಾಮಲಂ ಬಳಿ ನಡೆದಿದೆ.ಬಾಲಕಿ ಹಿತ್ತಲಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿದೆ.

ಶಮೀರ್ ಅವರ ಪುತ್ರಿ ಆಸಿಯಾ ರೈಹಾನ್ ಮೃತ ಬಾಲಕಿ.ಆಸಿಯಾ ಇತರ ಮಕ್ಕಳೊಂದಿಗೆ ಮನೆಯ ಹಿತ್ತಲಲ್ಲಿ ಆಟವಾಡುತ್ತಿದ್ದಳು.ಈ ವೇಳೆ ಹಾವು ಕಚ್ಚಿದೆ.ಮಗುವಿನ ಚೀರಾಟ ಕೇಳಿ ಪೋಷಕರು ಹೋಗಿ ನೋಡಿದಾಗ ವಿಚಾರ ತಿಳಿದು ಬಂದಿದೆ.ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮುತ್ತೀಚೂರು ಜುಮಾ ಮಸೀದಿ ಧಪನ ಭೂಮಿಯಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಯಿತು. ಮಗುವಿನ ಸಾವಿನಿಂದ ಪೋಷಕರ ರೋಧನ ಮುಗಿಲು ಮುಟ್ಟಿದೆ.

Related posts

ಪುತ್ತೂರು:ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿ ಮನೆಗೆ ಬಾರದೆ ನಾಪತ್ತೆ

ಸುಳ್ಯ:ಕೆ.ವಿ.ಜಿ ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ‘ಅಭಿನವ- 2024’,ಕಾರ್ಯಕ್ರಮದ ವಿಶೇಷತೆಗಳೇನು?ಇಲ್ಲಿದೆ ವರದಿ..

ಚಿಕನ್​ ಪ್ರಿಯರಿಗೆ ಶಾಕ್, ಆತಂಕ ಸೃಷ್ಟಿಸುತ್ತಿದೆ ಹಕ್ಕಿಜ್ವರ..! ಕೋಳಿ ಮತ್ತು ಮೊಟ್ಟೆ ತಿನ್ನದಂತೆ ಜನರಿಗೆ ಸೂಚನೆ ನೀಡಿದ್ದೆಲ್ಲಿ..?