ಭಕ್ತಿಭಾವ

ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುವ ಕರಡಿ

423

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಮತ್ತು ಮನುಷ್ಯನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರತಿ ನಿತ್ಯ ಒಂದಲ್ಲ ಒಂದು ಕಾಡು ಪ್ರಾಣಿಗಳ ಉಪಟಳ, ಮನುಷ್ಯನ ಮೇಲೆ ದಾಳಿ ಯಂತಹ ಘಟನೆಗಳು ನಡೆಯುತ್ತಲೇ ಇವೆ. ಆದ್ರೆ ನಾವು ಇಂದು ಹೇಳಹೊರಟಿರುವುದು ಕಾಡು ಪ್ರಾಣಿಯಲ್ಲಿರುವ ದೇವರ ಮೇಲಿನ ಭಕ್ತಿ ಬಗ್ಗೆ.ತುಮಕೂರಿನಲ್ಲಿ ಕರಡಿಯೊಂದು ದೇವಸ್ಥಾನಕ್ಕೆ ಬಂದು ವಿಶಿಷ್ಟ ರೀತಿಯಲ್ಲಿ ದೇವರ ಸ್ಮರಣೆ ಮಾಡಿದೆ. ಈ ದೃಷ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಕುಣಿಗಲ್ ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿ ಬಳಿ ಒಡೆಬೈರವೇಶ್ವರ ದೇವಾಲಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಮುಂಜಾನೆ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಚಿಲಿ ಪಿಲಿ ಹಕ್ಕಿಗಳ ನಾದ ಕೇಳುತ್ತಿರುವಾಗಲೇ ಕರಡಿಯೊಂದು ದೇವಸ್ಥಾನಕ್ಕೆ ಆಗಮಿಸುತ್ತದೆ, ನೇರವಾಗಿ ದೇವರ ಗರ್ಭದ ಗುಡಿಯ ಮುಂದೆ ನಿಂತು ದೇವರ ಧರ್ಶನ ಮಾಡುತ್ತದೆ. ಬಳಿಕ ಹಕ್ಕಿ ಪಕ್ಷಿಗಳ ಶಬ್ಧದಂತೆ ತಾನು ಸಹ ಎದ್ದು ನಿಂತು ನೃತ್ಯ ಮಾಡುವ ರೀತಿಯಲ್ಲಿ ಕೂಗುತ್ತಾ,ದೇವರ ದರ್ಶನ ಪಡೆಯುತ್ತದೆ.

ಕರಡಿಯನ್ನ ಕಂಡು ಕೆಲವರು ಆತಂಕ ವ್ಯಕ್ತ ಪಡಿಸಿದ್ರೆ, ಇನ್ನೂ ಕೆಲವರು ಕರಡಿಯಲ್ಲಿರುವ ದೇವರ ಮೇಲಿನ ಭಕ್ತಿ ಗುಣಗಳನ್ನ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

See also  ಗಣೇಶ ಭಕ್ತರಿಗೆ ಸಿಹಿ ಸುದ್ದಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಸಾಧ್ಯತೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget