ಕರಾವಳಿ

ಇಂದು ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಭಾರಿ ಮಳೆಯಾಗಲಿದ್ದು ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಈಗಾಗಲೇ ಕಳೆದ ಮೂರ್ನಾಲ್ಕು ತಿಂಗಳಿನಿಂದ ಭಾರಿ ಮಳೆಗೆ ಸಾಕ್ಷಿಯಾಗಿದೆ. ಇದೀಗ ಕರಾವಳಿ ಜಿಲ್ಲೆಗೆ ಮತ್ತೊಂದು ಸಲ ವರುಣನ ಅವಕೃಪೆ ಉಂಟಾಗುತ್ತಿದೆ. ಇಂದಿನಿಂದ ಶುರುವಾಗುವ ಮಳೆ ನಿರಂತರವಾಗಿ ಐದು ದಿನಗಳ ಕಾಲ ಕರಾವಳಿಗೆ ಕಾಡುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಐದು ದಿನಗಳಲ್ಲಿ ಮೂರು ದಿನ ಆರೆಂಜ್ ಅಲರ್ಟ್ ಆಗಿರಲಿದೆ ಎಂದು ತಿಳಿದು ಬಂದಿದೆ.

ಸದ್ಯ ಮಳೆ ಒಂದೊಂದು ಭಾಗಕ್ಕೆ ಸೀಮಿತವಾಗುತ್ತಿದೆ. ಕೆಲವು ಪ್ರದೇಶದಲ್ಲಿ ಮಳೆ ಬಂದರೆ ಇನ್ನೂ ಕೆಲವು ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು ನದಿ ನೀರಿನ ಪ್ರಮಾಣ ಇದ್ದಕ್ಕಿದ್ದಂತೆ ಏರುತ್ತಿದೆ. ಹೀಗಾಗಿ ನದಿ ಬದಿಗೆ ತೆರಳುವ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ.

Related posts

ಕೆಲಸಕ್ಕೆ ಹೋಗಿದ್ದ ಯುವತಿ ನಾಪತ್ತೆ, ದೂರು ದಾಖಲು

Railway Job|ಕೊಂಕಣ ರೈಲ್ವೆಯಲ್ಲಿ 190 ಹುದ್ದೆಗಳಿಗೆ ಅರ್ಜಿ ಆಹ್ವಾನ, ಕರ್ನಾಟಕದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ

ಮಂಗಳೂರು : ಪರವಾನಗಿ ಹೊಂದಿದ ಆಯುಧಗಳನ್ನು ಏ .13 ರೊಳಗೆ ಠೇವಣಿ ಇರಿಸಲು ಆದೇಶ