Latestಕೆವಿಜಿ ಕ್ಯಾಂಪಸ್‌ಶಿಕ್ಷಣ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಎನ್ ಎಂಸಿ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮ, ಸುಳ್ಯ ತಾಲ್ಲೂಕಿನ ಸ್ಥಳನಾಮೆಗಳ ಅಧ್ಯಯನ ಮತ್ತು ಮಾಹಿತಿ ಸಂಗ್ರಹ” ಕಾರ್ಯಗಾರ

227
Spread the love

ನ್ಯೂಸ್ ನಾಟೌಟ್ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ನೆಹರು ಮೆಮೋರಿಯಲ್ ಕಾಲೇಜು ಇದರ ಸಹಯೋಗದಲ್ಲಿ “ಸುಳ್ಯ ತಾಲ್ಲೂಕಿನ ಸ್ಥಳನಾಮೆಗಳ ಅಧ್ಯಯನ ಮತ್ತು ಮಾಹಿತಿ ಸಂಗ್ರಹ” ಕಾರ್ಯಗಾರ ಮಾರ್ಚ್ 8ರಂದು ನೆಹರು ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಗಾರವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಶೇಖರ ಪೇರಾಲ್, ಆಡಳಿತಾಧಿಕಾರಿಗಳು, ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇವರು ಸುಳ್ಯ ತಾಲೂಕಿನ ಸ್ಥಳನಾಮೆಗಳ ಅಧ್ಯಯನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಸ್ವಯಂಸೇವಕ – ಸೇವಕಿಯರು ಯಾವ ರೀತಿಯಲ್ಲಿ ಅಧ್ಯಯನ ಮಾಡಬೇಕು , ಒಂದೊಂದು ಸ್ಥಳಗಳು ಹೇಗೆ ಹುಟ್ಟಿಕೊಳ್ಳಲು ಸಾಧ್ಯವಾಯಿತು. ಈ ಬಗ್ಗೆ ಹೇಗೆ ಅಧ್ಯಯನ ಮಾಡಬೇಕು. ಸ್ಥಳನಾಮೆಯಲ್ಲಿ ಐತಿಹಾಸಿಕವಾಗಿ ಮತ್ತು ಭೌಗೋಳಿಕವಾಗಿ ಹೆಸರು ಹೇಗೆ ಹೆಸರು ಬಂದಿರುತ್ತದೆ. ಅದನ್ನು ನಾವು ಹೇಗೆ ದಾಖಲೆ ಮಾಡಬೇಕು ಎಂದು ತಿಳಿಸಿಕೊಟ್ಟರು.

ಕಾರ್ಯಗಾರದ ಅಧ್ಯಕ್ಷತೆಯನ್ನು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ. ಡಿ , ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಗಳಾದ ಚಿತ್ರಲೇಖ ಕೆ. ಎಸ್, ಶ್ರೀ ಹರಿಪ್ರಸಾದ್ ಅತ್ಯಾಡಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ನಾಯಕ ಹರ್ಷಿತ್ ಕೆ.ಎಲ್, ಕೌಶಿಕ್ ಕೆ. ಬಿ, ನಾಯಕಿಯರಾದ ಅಕ್ಷತಾ. ಸಿ, ಹವ್ಯಶ್ರೀ ಕೆ.ಎಸ್ ಹಾಗೂ ಸ್ವಯಂಸೇವಕ – ಸೇವಕಿಯರು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಗಳಾದ ಚಿತ್ರಲೇಖ ಕೆ. ಎಸ್ ಸ್ವಾಗತಿಸಿ, ಹರಿಪ್ರಸಾದ್ ಅತ್ಯಾಡಿಯವರು ವಂದಿಸಿದರು. ಎನ್.ಎಸ್.ಎಸ್ ಘಟಕದ ನಾಯಕಿ ಹವ್ಯಶ್ರೀ ಕೆ. ಎಸ್ ಕಾರ್ಯಕ್ರಮ ನಿರೂಪಿಸಿದರು.

See also  ಕನಕಮಜಲು: ಇಬ್ಬರನ್ನು ಬಲಿ ಪಡೆದ ಹಿಟ್ ಆ್ಯಂಡ್ ರನ್ ಆದ ಸ್ಥಳದಲ್ಲಿ ಮತ್ತೊಂದು ಅವಘಡ, ಉರುಳಿಬಿದ್ದ ಕಂಟೈನರ್
  Ad Widget   Ad Widget   Ad Widget