ನ್ಯೂಸ್ ನಾಟೌಟ್: ಯುವತಿಯೊಬ್ಬಳು ಟ್ಯಾಬ್ಲೆಟ್ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ ಘಟನೆ ಸುಳ್ಯದ ಗಾಂಧಿನಗರದಿಂದ ವರದಿಯಾಗಿದೆ.ಕೃತ್ಯ ಎಸಗಿಕೊಂಡವರನ್ನು ಮಂಗಳೂರಿನ ಬೀದಿಗುಡ್ಡೆಯ ರಮ್ಯ ಎಂದು ಗುರುತಿಸಲಾಗಿದೆ.
26 ವರ್ಷದ ರಮ್ಯ ಈ ಕೃತ್ಯ ಎಸಗಿಕೊಂಡಿರುವುದಕ್ಕೆ ಕಾರಣ ಏನು ಅನ್ನುವುದು ಇನ್ನೂ ತಿಳಿದು ಬಂದಿಲ್ಲ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.