Latestಕರಾವಳಿಕೇರಳಮಂಗಳೂರು

ನೆರೆಯ ಕೇರಳದಿಂದ ಮಂಗಳೂರಿಗೆ ಬಯೋ ಮೆಡಿಕಲ್ ವೇಸ್ಟ್,ತ್ಯಾಜ್ಯ ಡಂಪಿಂಗ್:ಮಂಗಳೂರು ಪಾಲಿಕೆ ಅಧಿಕಾರಿಗಳೇ ಕೃತ್ಯದಲ್ಲಿ ಭಾಗಿ

602
Spread the love

ನ್ಯೂಸ್‌ ನಾಟೌಟ್:ಇತ್ತೀಚೆಗೆ ಕೇರಳದಿಂದ ಕೊಳಚೆ ತ್ಯಾಜ್ಯ ತಂದು ಮಂಗಳೂರಿನ ನದಿ, ಚರಂಡಿಗಳಿಗೆ ಸುರಿಯುತ್ತಿದ್ದಾರೆ ಅನ್ನೋ ವಿಚಾರ ಭಾರೀ ಚರ್ಚೆಯಲ್ಲಿತ್ತು. ಆದ್ರೀಗ ಮತ್ತೊಂದು ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಬರಿ ಕೊಳೆಚೆ ತ್ಯಾಜ್ಯ ಮಾತ್ರವಲ್ಲ, ಬಯೋ ಮೆಡಿಕಲ್ ವೇಸ್ಟ್ ಕೂಡ ಸುರಿಯುತ್ತಿದ್ದರು ಎನ್ನುವ ಆಘಾತಕಾರಿ ಅಂಶಕ್ಕೆ ಬೆಚ್ಚಿ ಬೀಳುವಂತಾಗಿದೆ.

ಹೌದು. ಅಕ್ರಮವಾಗಿ ಬಯೋ ಮೆಡಿಕಲ್ ವೇಸ್ಟ್ ಕೂಡ ತಂದು ಮಂಗಳೂರಿನ ಸಿಕ್ಕ ಸಿಕ್ಕ ಹಳ್ಳಕ್ಕೆ ಬೀಸಾಕಿ ನೀರನ್ನು ಕಲುಷಿತಗೊಳಿಸುತ್ತಿದ್ದರು. ಇದರಿಂದ ಜಲಚರಗಳಿಗೆ ಹಾಗೂ ಜೀವ ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದ್ದು, ವಿಪರೀತ ಮಾಲಿನ್ಯದಿಂದಾಗಿ ಮನುಷ್ಯರು ಕೂಡ ಅಲ್ಲಿ ವಾಸಿಸದಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಇನ್ನೊಂದು ಮಹತ್ವದ ಹಾಗೂ ಭಯಗೊಳಿಸುವ ವಿಚಾರವೆಂದರೆ ಮಂಗಳೂರು ನಗರ ಪಾಲಿಕೆ ಸೇರಿದ ಎರಡು ಟ್ಯಾಂಕರ್ ಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅನ್ನೋ ವಿಚಾರ ಬಹಿರಂಗಗೊಂಡಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಕೃತ್ಯದಲ್ಲಿ ಕೈಜೋಡಿಸಿದ್ರು ಅಂತ ಅಧಿಕಾರಿಗಳ ವಿರುದ್ಧ ಇದೀಗ ಕೇಸ್ ಹಾಕಲಾಗಿದೆ.

ಈ ಬೆನ್ನಲ್ಲೇ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದಾರೆ.ಕೇರಳದಿಂದ ಈ ರೀತಿಯಲ್ಲಿ ಬಯೋ ಮೆಡಿಕಲ್ ವೇಸ್ಟ್ ಸುರಿಯುವ ವಿಚಾರ ಭಾರೀ ಆತಂಕಕಾರಿ.. ಇದರಿಂದ ರೋಗ ರುಜಿನ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪಾಲಿಕೆ ಈ ವಿಚಾರ ಗಂಭೀರವಾಗಿ ತೆಗೆದುಕೊಂಡು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಆದೇಶಿಸಿದ್ದಾರೆ.

See also  ಕಾರ್ಕಳ : ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಸಭೆ
  Ad Widget   Ad Widget   Ad Widget   Ad Widget