ಕೊಡಗು

ಮಡಿಕೇರಿ:28 ದಿನಗಳ ಹಿಂದೆಯಷ್ಟೇ ನೇಮಕಗೊಂಡಿದ್ದ ಅಧಿಕಾರಿ ಸಾವು,ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಫಲಿಸದ ಚಿಕಿತ್ಸೆ

ನ್ಯೂಸ್‌ ನಾಟೌಟ್‌ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ  ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.ಮೃತ ಅಧಿಕಾರಿಯನ್ನು ಶ್ರೀಧರ್ ಮೂರ್ತಿ ಎಂದು ಗುರುತಿಸಲಾಗಿದೆ.

ಏನಾಗಿತ್ತು?

ಎಂದಿನಂತೆ ಅವರು ಕಚೇರಿಗೆ ಬಂದು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಇದೇ ದಿನ ಕಚೇರಿಯಲ್ಲಿ ಸಭೆ ಇತ್ತು. ಸಭೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇನ್ನೇನು ಸಭೆ ಆರಂಭವಾಗಬೇಕು ಅನ್ನುವಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. ಗಾಬರಿಯಾದ ಸಿಬ್ಬಂದಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಇವರು 28 ದಿನಗಳ ಹಿಂದಷ್ಟೇ ಕೊಡಗು ಆಹಾರ ಮತ್ತು ನಾಗರಿಕ ಸರಬರಾಜು ಡಿಡಿ ಆಗಿ ಬಂದಿದ್ದರು ಎಂದು ತಿಳಿದು ಬಂದಿದೆ.

Related posts

ಅಭಿ ಕೊಲ್ಲಿ ಬಳಿ ಬೋರಲು ಬಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ದುರಂತ

ಮಡಿಕೇರಿ: ಟಿಪ್ಪರ್-ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಇಬ್ಬರಿಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು

ಶ್ರೀ ಭಗಂಡೇಶ್ವರ-ತಲಕಾವೇರಿ: ನ.8 ರಂದು ಶ್ರೀ ಮಹಾವಿಷ್ಣುಮೂರ್ತಿ ಕೋಲ, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವಂತೆ ಕೋರಿಕೆ