ದೇಶ-ಪ್ರಪಂಚದೇಶ-ವಿದೇಶರಾಜಕೀಯವಿಡಿಯೋ

ಕೃತಕ ಬುದ್ಧಿಮತ್ತೆ(AI)ಯಿಂದ ಉದ್ಯೋಗ ನಷ್ಟವೆಂಬುದು ಭ್ರಮೆ ಎಂದ ನರೇಂದ್ರ ಮೋದಿ..! ಎಐ ಕ್ರಿಯಾ ಶೃಂಗಸಭೆ​ ಉದ್ದೇಶಿಸಿ ಪ್ಯಾರಿಸ್ ನಲ್ಲಿ ಮೋದಿ ಮಾತು

ನ್ಯೂಸ್‌ ನಾಟೌಟ್: ಕೃತಕ ಬುದ್ಧಿಮತ್ತೆ (ಎಐ)ಯಿಂದ ಉದ್ಯೋಗ ನಷ್ಟವಾಗುತ್ತದೆ ಎಂಬುದು ಭ್ರಮೆ. ಇದು ಈ ಶತಮಾನದಲ್ಲಿ ಇಡೀ ಮಾನವತೆಗೆ ಕೋಡ್‌ ಬರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ನಲ್ಲಿ ಭಾಷಣ ಮಾಡಿದ್ದಾರೆ.

ಪ್ಯಾರಿಸ್‌ ನಲ್ಲಿಂದು(ಫೆ.11) ಎಐ ಕ್ರಿಯಾ ಶೃಂಗಸಭೆ​ ಉದ್ದೇಶಿಸಿ ಮೋದಿ ಮಾತನಾಡಿದರು. ತಮ್ಮ ಭಾಷಣದಲ್ಲಿ ಕೃತಕ ಬುದ್ಧಿಮತ್ತೆಯ ಪಾರದರ್ಶಕ ಮತ್ತು ಜವಾಬ್ದಾರಿಯುತ ಅಭಿವೃದ್ಧಿಯ ಕುರಿತು ಹೇಳಿದ್ದಾರೆ.
ಪ್ಯಾರಿಸ್‌ ನ ಗ್ರ್ಯಾಂಡ್ ಪ್ಯಾಲೇಸ್‌ ನಲ್ಲಿ ನಡೆದ ಶೃಂಗಸಭೆಯಲ್ಲಿ ಮೋದಿ, “ಇಂದು ಎಐ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ. ನೀವು ನಿಮ್ಮ ವೈದ್ಯಕೀಯ ವರದಿಯನ್ನು ಎಐ ಅಪ್ಲಿಕೇಶನ್‌ ಗೆ ಅಪ್‌ಲೋಡ್ ಮಾಡಿದರೆ, ಅದು ಅದರ ಅರ್ಥವನ್ನು ಸರಳ ಭಾಷೆಯಲ್ಲಿ ವಿವರಿಸುತ್ತದೆ. ಇದು ಎಐನ ಸಕಾರಾತ್ಮಕ ಸಾಮರ್ಥ್ಯ” ಎಂದರು.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಕಾರ್ಯಕ್ರಮದ ಸಹ-ಅಧ್ಯಕ್ಷತೆ ವಹಿಸಿದ್ದ ಮೋದಿ, ನಾವು ಮಾನವೀಯತೆಯ ಹಾದಿಯನ್ನು ಉಳಿಸುವ ಎಐ ಯುಗದ ಆರಂಭದಲ್ಲಿದ್ದೇವೆ. ಯಂತ್ರಗಳು ಮನುಷ್ಯನನ್ನು ಮೀರಿಸುತ್ತಿವೆ ಎಂದು ಕೆಲವರು ಚಿಂತಿಸುತ್ತಿದ್ದಾರೆ. ಆದರೆ ನಮ್ಮ ಭವಿಷ್ಯದ ಕೀಲಿಕೈಗಳು ಮತ್ತು ಹಣೆಬರಹವನ್ನು ರೂಪಿಸಬೇಕಾದವರು ಮನುಷ್ಯರಾದ ನಾವು, ಹೊರತುಪಡಿಸಿ ಬೇರಾರೂ ಅಲ್ಲ. ಈ ಜವಾಬ್ದಾರಿಯ ಪ್ರಜ್ಞೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ಎಐ ಬಗ್ಗೆ ಹಲವು ಪೂರ್ವಾಗ್ರಹಗಳಿದ್ದು, ನಾವು ಎಚ್ಚರಿಕೆಯಿಂದ ಯೋಚಿಸಬೇಕಾಗಿದೆ ಎಂದು ಹೇಳಿದರು.

Related posts

ನನ್ನ ಅನುವಾದಕರಾಗಿರುವುದು ಅಪಾಯಕಾರಿ ಎಂದದ್ದೇಕೆ ರಾಹುಲ್ ಗಾಂಧಿ..? ತೆಲಂಗಾಣದಲ್ಲಾದ ಆ ಘಟನೆ ಏನು..?

ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಗೆ ಬಿಗಿ ಭದ್ರತೆ..! ಉಗ್ರ ದಾಳಿಯ ಸೂಚನೆ..!

ಯಡಿಯೂರಪ್ಪ ಇದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ದುರಂತ! ಎರಡನೇ ಬಾರಿಗೆ ಪಾರಾದ ಮಾಜಿ ಮುಖ್ಯಮಂತ್ರಿ!