ಕರಾವಳಿ

ಸದಾ ಮುಸ್ಲಿಮರೇ ಟಾರ್ಗೆಟ್,ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ:ಉದಯಗಿರಿ ಕಲ್ಲು ತೂರಾಟಕ್ಕೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

383
Spread the love

ನ್ಯೂಸ್‌ ನಾಟೌಟ್‌ :ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಲ್ಯಾಣಗಿರಿ ಬಡಾವಣೆಯ ಯುವಕನೊಬ್ಬ ಹಾಕಿದ ಸೋಷಿಯಲ್‌ ಮೀಡಿಯಾ ಪೋಸ್ಟ್ ಸಾಮಾಜಿಕ ಸ್ವಾಸ್ಥ್ಯವನ್ನೇ ಕೆಡಿಸಿದೆ. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಆತ ಪೋಸ್ಟ್ ಮಾಡಿದ್ದ. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಲಾಗಿತ್ತು.ಇದೀಗ ಉದಯಗಿರಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಉದಯಗಿರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೂ ಮುನ್ನ ಮೌಲ್ವಿಯೊಬ್ಬರು ಪ್ರಚೋದನಕಾರಿ ಭಾಷಣ ಮಾಡಿರುವ ವೀಡಿಯೋವೊಂದು ಬಾರಿ ವೈರಲ್ ಆಗಿದೆ. ಅವರು ಮೈಕ್ ಹಿಡಿದು ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.ಸದ್ಯ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

ಹೇಳಿದ್ದೇನು?

ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ ಎನ್ನುತ್ತಾ ಧರ್ಮ ರಕ್ಷಣೆಯ ಬದ್ಧತೆ ನಿನ್ನೆನೂ ಇತ್ತು, ಇವತ್ತು ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ ಎಂದಿದ್ದಾರೆ. ಮತ್ತೂ ಮುಂದುವರಿದು ಭಾಷಣ ಮಾಡುತ್ತಾ ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು, ಮರಣದಂಡನೆ ವಿಧಿಸಬೇಕು ಎಂದು ಮೌಲ್ವಿ ಹೇಳಿದ್ದಾರೆ.

ಮೈಸೂರಿನ ಎಲ್ಲಾ ಮುಸ್ಲಿಮರು ಒಂದಾಗಿ ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳ ತಲೆ ಬೇಕಾದರೂ ಬಲಿಕೊಡುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

See also  ಪುತ್ತೂರಿನ ನವವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ..! ಸಂಬಂಧಿಕರ ಮನೆಯಲ್ಲಿ ನೇಣಿಗೆ ಶರಣು..!
  Ad Widget   Ad Widget   Ad Widget   Ad Widget