ಕ್ರೈಂರಾಜಕೀಯವಿಡಿಯೋವೈರಲ್ ನ್ಯೂಸ್

ಅಕ್ರಮ ಮರುಳುಗಾರಿಕೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗ್ರೆಸ್​ ಶಾಸಕನ ಪುತ್ರ..! ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್

ನ್ಯೂಸ್‌ ನಾಟೌಟ್:ಅಕ್ರಮ ಮರುಳುಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಕಾಂಗ್ರೆಸ್​ ಶಾಸಕ ಬಿ.ಕೆ.ಸಂಗಮೇಶ್ (BK Sangamesh) ಮಗ ಅವಾಚ್ಯ ಶಬ್ದಗಳಿಂದ ಬೈದರಿರುವ ವಿಡಿಯೋ ವೈರಲ್ ಆಗಿದೆ.

ಭದ್ರಾವತಿ ಭದ್ರಾ ನದಿತಟದಲ್ಲಿ ನಡೆಯುತ್ತಿದ್ದ ಅಕ್ರಮ ಮರುಳು ಗಣಿಗಾರಿಕೆ ಮೇಲೆ ಗಣಿ ಇಲಾಖೆಯ ಮಹಿಳಾ ವಿಜ್ಞಾನಿ ಸೋಮವಾರ(ಫೆ.10) ಮಧ್ಯರಾತ್ರಿ ದಾಳಿ ಮಾಡಿದ್ದರು. ಈ ವೇಳೆ ಶಾಸಕ ಬಿಕೆ ಸಂಗಮೇಶ್​ ಪುತ್ರ ಮಹಿಳಾ ಅಧಿಕಾರಿಗೆ ದೂರವಾಣಿ ಕರೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಹಿಳಾ ಅಧಿಕಾರಿಗೆ ಅಶ್ಲೀಲವಾಗಿ ಬೈದಿರುವ ವಿಡಿಯೋ ವೈರಲ್ ಆಗಿದೆ.

ಮಹಿಳಾ ಅಧಿಕಾರಿಗೆ ನಿಂದಿಸಿದ ಶಾಸಕ ಸಂಗಮೇಶ್ ಪುತ್ರನ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದೆ. ಶಾಸಕ ಸಂಗಮೇಶ್ ಪುತ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

 

Related posts

ಸುಳ್ಯ: ಅನಾಥ ಕಾರಿನ ಬಗ್ಗೆ ಹಬ್ಬಿದ ಊಹಾಪೋಹಗಳೇನು? ಕೊನೆಗೂ ಘಟನೆಗೆ ತೆರೆಬಿದ್ದದ್ದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ವಂದೇ ಭಾರತ್‌ ರೈಲಿಗೆ ಪದೇ ಪದೆ ಕಲ್ಲು ತೂರಾಟ, ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಇಲಾಖೆ ಕೈಗೊಂಡ ಕ್ರಮ ಏನು..?

ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಯುವವಾಗ್ಮಿ ಶ್ರೀದೇವಿ ಆರೋಗ್ಯ ವಿಚಾರಿಸಿದ ಅರುಣ್ ಪುತ್ತಿಲ