ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಶಾಲಾ ಬೀಳ್ಕೊಡುಗೆ ನೆಪದಲ್ಲಿ ಐಷಾರಾಮಿ ಕಾರುಗಳಲ್ಲಿ 12ನೇ ತರಗತಿ ವಿದ್ಯಾರ್ಥಿಗಳ ಸ್ಟಂಟ್..! 26 ಕಾರುಗಳ ಪೈಕಿ 12 ಕಾರುಗಳನ್ನು ವಶಕ್ಕೆ..!

ನ್ಯೂಸ್‌ ನಾಟೌಟ್: ಪ್ರತಿಷ್ಠಿತ ಶಾಲೆಯೊಂದರ 35 ಮಂದಿ 12ನೇ ತರಗತಿ ವಿದ್ಯಾರ್ಥಿಗಳು ಬೀಳ್ಕೊಡುಗೆ ಸಮಾರಂಭಕ್ಕೆ ಸೂರತ್ ನ ದಂಡಿ ರಸ್ತೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಸ್ಟಂಟ್ ಪ್ರದರ್ಶಿಸುತ್ತಾ, ಪಟಾಕಿಗಳನ್ನು ಸಿಡಿಸುತ್ತಾ ತೆರಳಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಬೆನ್ನಲ್ಲೇ ವಿದ್ಯಾರ್ಥಿಗಳು ಹಾಗೂ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಬಾಲಿವುಡ್ ಫ್ಲಿಕ್ ‘ಅನಿಮಲ್’ನ ಹಾಡಿಗೆ ನೃತ್ಯ ಮಾಡುತ್ತಾ ಸಾಗುವ ದೃಶ್ಯವನ್ನು ಸೆರೆಹಿಡಿಯಲಾದ ರೀಲ್ಸ್ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೋಮವಾರ(ಫೆ.11) ಪೊಲೀಸರು ಈ ವಿದ್ಯಾರ್ಥಿಗಳ ವಿರುದ್ಧ ಮತ್ತು ಪೋಷಕರ ವಿರುದ್ಧ ಕ್ರಮ ಕೇಸ್ ದಾಖಲಿಸಿದ್ದಾರೆ. ಇಲ್ಲಿವರೆಗೆ 26 ಕಾರುಗಳ ಪೈಕಿ 12 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಐಷಾರಾಮಿ ಪೋಷಾಕುಗಳನ್ನು ಧರಿಸಿ, ವಿಲಾಸಿ ಕಾರುಗಳಲ್ಲಿ ಬೀಳ್ಕೊಡುಗೆ ಸಮಾರಂಭಕ್ಕೆ ತೆರಳುವ ಮೂಲಕ ಸಂಸ್ಥೆಯಲ್ಲಿ ತಮ್ಮ ಕೊನೆಯ ದಿನವನ್ನು ಕಳೆಯಲು ವಿದ್ಯಾರ್ಥಿಗಳು ತೆರಳುತ್ತಿದ್ದರು. ಡ್ರೋಣ್ ಮತ್ತು ಕ್ಯಾಮೆರಾಗಳನ್ನು ಬಳಸಿ ಇದರ ವಿಡಿಯೊ ಚಿತ್ರೀಕರಿಸಿದ್ದರು. ವಿಡಿಯೋ ವಿರುದ್ಧ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಅಪಾಯಕಾರಿ ಸ್ಟಂಟ್ ಗಳನ್ನು ರಸ್ತೆಯಲ್ಲಿ ಪ್ರದರ್ಶಿಸಿದರೂ, ಕ್ರಮ ಕೈಗೊಳ್ಳದ ಪೊಲೀಸರ ಕ್ರಮವನ್ನು ನಾಗರಿಕರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

 

Related posts

ನಮಾಜ್‌ ವೇಳೆ ಹನುಮಾನ್‌ ಚಾಲೀಸ ಹಾಕಿದನಾ ಅಂಗಡಿ ಮಾಲೀಕ..? ಹೊರಗೆಳೆದು ಥಳಿಸಿದ ಯುವಕರು..!

ಮಗಳ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ತಂದೆ..! ಪತಿಯ ಕೃತ್ಯಕ್ಕೆ ಪತ್ನಿ ಮಾಡಿದ್ದೇನು..?

‌ಪಾಕ್‌ ಮೈದಾನದಲ್ಲಿ ಬೆಂಗಳೂರು ಮೂಲದ ಸ್ಟಾರ್‌ ಆಟಗಾರನ ಹಣೆಗೆ ಬಡಿದ ಚೆಂಡು..! ರಕ್ತ ಸೋರುತ್ತಲೇ ಹೊರನಡೆದ ರಚಿನ್‌ ರವೀಂದ್ರ..!