ಕ್ರೈಂರಾಜಕೀಯರಾಜ್ಯವೈರಲ್ ನ್ಯೂಸ್

ಕರ್ನಾಟಕದಲ್ಲಿ ಇನ್ನು ಮುಂದೆ ದ್ವೇಷ ಭಾಷಣ ಮಾಡಿದ್ರೆ 3 ವರ್ಷ ಜೈಲು..! ಹೊಸ ಮಸೂದೆ ತರಲು ಸರ್ಕಾರದ ತಯಾರಿ..!

ನ್ಯೂಸ್ ನಾಟೌಟ್: ದ್ವೇಷ ಭಾಷಣ ಮಾಡಿ ಸಾಬೀತಾದ್ರೆ ಕರ್ನಾಟಕದಲ್ಲಿ ಇನ್ನು ಮುಂದೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಸೂದೆಯೊಂದನ್ನ ತರಲು ಸಿದ್ಧತೆ ನಡೆಯುತ್ತಿದೆ.

ಬಜೆಟ್ ಅಧಿವೇಶನದಲ್ಲಿ ಬಿಲ್‌ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ ವಿಧೇಯಕ 2025 ಕರಡನ್ನ ಕಾನೂನು ಇಲಾಖೆ ಸಿದ್ಧಪಡಿಸಿದೆ. ಜಾತಿ, ಧರ್ಮ ಆಧರಿಸಿ ದ್ವೇಷ ಭಾಷಣ ಮಾಡಿದರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ಅಂಗವೈಕಲ್ಯ, ಬುಡಕಟ್ಟುವಿನ ಕುರಿತು ದ್ವೇಷ ಭಾಷಣ ಮಾಡುವಂತಿಲ್ಲ ಎಂಬುದನ್ನ ಬಿಲ್ ನಲ್ಲಿ ತಿಳಿಸಲಾಗಿದೆ. ಈ ಮಸೂದೆ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರ ಆಗುತ್ತಾ..? ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

Related posts

Darshan Thoogudeepa: ದರ್ಶನ್‌ ಬಗ್ಗೆ ಕೋಡಿಮಠ ಶ್ರೀಗಳಿಂದ ಸ್ಪೋಟಕ ಭವಿಷ್ಯ..! ಇಲ್ಲಿದೆ ಸಂಪೂರ್ಣ ಮಾಹಿತಿ

ಹುಲ್ಲು ಮೇಯುತ್ತಿದ್ದ ವೇಳೆ ಹೆಡೆಯೆತ್ತಿ ನಿಂತ ನಾಗರ ಹಾವನ್ನು ಮುದ್ದಾಡಿದ ಹಸು..! ಇಲ್ಲಿದೆ ಅಪರೂಪದ ವಿಡಿಯೋ

ಕಡಬ: ಯುವತಿಗೆ 15 ಮೊಬೈಲ್ ಗಳಿಂದ ಫೋನ್ ಮಾಡಿ ಸಿಕ್ಕಿ ಬಿದ್ದ ಯುವಕ