ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಹಿಂದೂ ವಿದ್ಯಾರ್ಥಿ ಕೈಗೆ ಕಟ್ಟಿದ ದಾರವನ್ನು ಕತ್ತರಿಸಿದ ದಕ್ಷಿಣ ಆಫ್ರಿಕಾದ ಶಿಕ್ಷಕ..! ಹಿಂದೂ ಮಹಾಸಭಾ ಆಕ್ರೋಶ..!

ನ್ಯೂಸ್ ನಾಟೌಟ್ :ದಕ್ಷಿಣ ಆಫ್ರಿಕಾದ ಶಿಕ್ಷಕನೊಬ್ಬ ಹಿಂದೂ ವಿದ್ಯಾರ್ಥಿಯು ಕೈಗೆ ಕಟ್ಟಿಕೊಂಡಿದ್ದ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ದಾರವನ್ನು ಕತ್ತರಿಸಿ ಆತನಿಗೆ ಅವಮಾನ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕೆರಳಿದ ದಕ್ಷಿಣ ಆಫ್ರಿಕಾದ ಹಿಂದೂ ಸಮುದಾಯ ಇದನ್ನು ತೀವ್ರವಾಗಿ ಖಂಡಿಸಿದೆ.

ಇದೊಂದು ಸೂಕ್ಷ್ಮತೆಯಿಲ್ಲದ ಹಾಗೂ ಬೇಜವಾಬ್ದಾರಿ ಕಾರ್ಯ ಎಂದು ಆಕ್ರೋಶ ವ್ಯಕ್ತವಾಗಿದೆ.ಈ ಘಟನೆ ಕಳೆದ ವಾರ ಡ್ರ್ಯಾಕನ್ಸ್ ​ಬರ್ಗ್ ಸೆಂಕಡರಿ ಸ್ಕೂಲ್​ ನಲ್ಲಿ ನಡೆದಿದೆ ಎನ್ನಲಾಗಿದೆ. ಇದು ಕ್ವಾಜುಲು ನಟಲಾ ಪ್ರಾಂತ್ಯದಲ್ಲಿದೆ.

ಈ ಕ್ರಮವನ್ನ ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾ ತೀವ್ರವಾಗಿ ಖಂಡಿಸಿದ್ದು ಶಿಕ್ಷಣ ಪ್ರಾಧಿಕಾರಕ್ಕೆ ಕೂಡಲೇ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದೆ. ಮಣಿಕಟ್ಟಿಗೆ ಕಟ್ಟಿಕೊಂಡಿದ್ದ ಪವಿತ್ರದಾರವನ್ನು ಶಿಕ್ಷಕ ಶಾಲೆಯಲ್ಲಿ ಧರ್ಮವನ್ನು ಪ್ರತಿನಿಧಿಸುವ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಕೇತಗಳನ್ನ ಯಾವುದೇ ರೀತಿ ಧರಿಸುವಂತಿಲ್ಲ ಎಂದು ದಾರವನ್ನು ಕತ್ತರಿಸಿ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಇನ್ನು ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭಾದ ಅಧ್ಯಕ್ಷ ಅಶ್ವಿನ್ ತ್ರಿಕಮ್ ​ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ಹಾಗೂ ಚೇರ್ ​ಮೆನ್ ​ರೊಂದಿಗೆ ಮಾತನಾಡಿದ್ದು. ನಾವೆಲ್ಲರೂ ಹಿಂದೂಗಳು, ನಿಮ್ಮ ಶಾಲೆಯಲ್ಲಿ ರಿಂಗು, ಸ್ಟ್ರಿಂಗು ಹಾಕಿಕೊಂಡು ಬರಲು ಉಳಿದ ವಿದ್ಯಾರ್ಥಿಗಳಿಗೆ ಅವಕಾಶವಿದೆ. ನಮ್ಮ ಹಿಂದೂ ವಿದ್ಯಾರ್ಥಿಗೆ ಪವಿತ್ರ ದಾರ ಕಟ್ಟಿಕೊಂಡು ಬರಲು ಯಾಕೆ ಅವಕಾಶವಿಲ್ಲ. ಅವನ ವಿರುದ್ಧ ಈ ರೀತಿ ನಡೆದುಕೊಂಡಿರುವುದು ನಿಜಕ್ಕೂ ಅನ್ಯಾಯ ಎಂದು ಹೇಳಿದ್ದಾರೆ ಎನ್ನಲಾಗಿದೆ.

Click

ಗೋ ಹತ್ಯೆ ಮಾಡಿದ್ರೆ ಸರ್ಕಲ್‌ ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದ ಕಾಂಗ್ರೆಸ್ ಸಚಿವ..! ಮಂಕಾಳ ವೈದ್ಯ ಖಡಕ್ ಎಚ್ಚರಿಕೆ..!

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು

ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!

ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ನೂತನ ಅಧ್ಯಕ್ಷ ಟ್ರಂಪ್ ಜೊತೆ ಮಾತುಕತೆ

Related posts

ಫೆ.14ರಿಂದ 3 ದಿನ ಮದ್ಯ ಮಾರಾಟ ಬಂದ್..? ಪ್ರೇಮಿಗಳ ದಿನಾಚರಣೆ ಕಾರಣವಾ..?

ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣವನ್ನೂ ದೋಚಿದ್ದರು ದರ್ಶನ್ ಸಹಚರರು..! ಆರೋಪಿ ರವಿ ಬಾಯ್ಬಿಟ್ಟ ರೋಚಕ ಕಹಾನಿ ಇಲ್ಲಿದೆ..!

ಕೋಟಿಗಟ್ಟಲೆ ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬೆಂಬಲಕ್ಕೆ ನಿಂತರಾ ಕೇಂದ್ರ ಸಚಿವೆ? ಶೋಭಾ ಕರಂದ್ಲಾಜೆ ಹೇಳಿದ್ದೇನು?