ನ್ಯೂಸ್ ನಾಟೌಟ್ : ಮಹಾ ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ 1,000 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ನಾನು ಹೇಳಿದ್ದೇನೆ. ಒಂದು ವೇಳೆ ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ಸಾವಿನ ಸಂಖ್ಯೆಯ ನಿಖರವಾದ ವರದಿಯನ್ನು ಬಿಡುಗಡೆ ಮಾಡಲಿ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯಸಭೆಯಲ್ಲಿಂದು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಖರ್ಗೆ, ಜನವರಿ 29ರಂದು ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮಡಿದ ʻಸಾವಿರಾರುʼ ಜನರಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ತಿಳಿಸಿದ್ರು. ಈ ವೇಳೆ ಸಭಾಪತಿ ಜಗದೀಪ್ ಧನಕರ್ ಅವರು, ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಹೇಳಿದರು.
ಬಳಿಕ ಮಾತು ಮುಂದುವರಿಸಿದ ಖರ್ಗೆ, ಮಹಾಕುಂಭದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ. ತುಂಬಾ ಜನರು ಅಲ್ಲಿ ಪ್ರಾಣ ಕಳೆದುಕೊಂಡರು. ನಾನು ಅಲ್ಲಿ 1 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ನಾನು ಹೇಳಿದ್ದೇನೆ. ನಾನು ಹೇಳಿದ್ದು ತಪ್ಪು ಎನ್ನುವುದಾದರೆ ಕನಿಷ್ಠ ಅಲ್ಲಿ ಆಗಿರುವ ಸಾವುಗಳ ಸಂಖ್ಯೆಯ ನಿಖರವಾದ ವರದಿ ಕೊಡಿ ಎಂದು ಆಗ್ರಹಿಸಿದರು. ಖರ್ಗೆ ಹೇಳಿಕೆಗೆ ಆಡಳಿತ ಪಕ್ಷ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಗದ್ದಲ ಏರ್ಪಟ್ಟಿತು.
Click
ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶ್ವವಾಯು..! ಸ್ಥಿತಿ ಗಂಭೀರ..!
ಫ್ಯಾಷನ್ ಹೆಸರಿನಲ್ಲಿ ವೇದಿಕೆಯಲ್ಲಿ ಬೆತ್ತಲಾದ ಜನಪ್ರಿಯ ರ‍್ಯಾಪ್ ಗಾಯಕನ ಪತ್ನಿ..! ಆಕೆಯ ಬಂಧನಕ್ಕೆ ಆಗ್ರಹ
https://newsnotout.com/food-delivery-through-drone-kannada-news-china-d/
ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!
ಮೆಣಸಿನ ಬಜ್ಜಿ ಮಾಡಿ ತಿಂದು ಚಿನ್ನ ಹಣ ಕದ್ದೊಯ್ದ ಕಳ್ಳರು..! ಗ್ಯಾಸ್ ಸಿಲಿಂಡರ್ ಗಳೂ ನಾಪತ್ತೆ..!