ನ್ಯೂಸ್ ನಾಟೌಟ್ :ಕುಂಭಮೇಳದಲ್ಲಿ ಮಮತಾ ಕುಲಕರ್ಣಿ ಅಖಾಡದಿಂದ ಹೊರಹಾಕಲ್ಪಟ್ಟು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಕಿನ್ನರ ಅಖಾಡದಿಂದ ‘ಮಹಾಮಂಡಲೇಶ್ವರ’ ಪಟ್ಟ ಪಡೆದುಕೊಂಡಿದ್ದರು. ಇದಾದ ಒಂದೇ ವಾರದಲ್ಲಿ ಅವರನ್ನು ಅಖಾಡದಿಂದ ತೆಗೆದು ಹಾಕಲಾಯಿತು. ಇದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಮಮತಾ ವಿರುದ್ಧ ಅನೇಕರು ಸಿಟ್ಟಾಗಿದ್ದಾರೆ.
ಗ್ಲಾಮರ್ ಲೋಕದಲ್ಲಿ ಇದ್ದ ಅವರು ಈಗ ಅಧ್ಯಾತ್ಮದ ಕಡೆ ಒಲವು ತೋರಿಸಿದ್ದು ಏಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಅಲ್ಲದೆ, ‘ಮಹಾಮಂಡಲೇಶ್ವರ’ ಟೈಟಲ್ ಪಡೆಯಲು 10 ಕೋಟಿ ರೂಪಾಯಿ ನೀಡಿದ್ದರು ಎನ್ನುವ ಆರೋಪವೂ ಬಂದಿತ್ತು. ಇದಕ್ಕೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ.
ಕಿನ್ನರ ಅಖಾಡ ಅಥವಾ ಕಿನ್ನರ ಅಖಾರ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡಿರುವ ತೃತೀಯ ಲಿಂಗಿಗಳ ಸಂಘವಾಗಿದೆ. 2015 ರಲ್ಲಿ ಪ್ರಾರಂಭವಾದ ಕಿನ್ನರ ಅಖಾಡ ಇದೀಗ ನಟಿ ಮಮತಾ ಕುಲಕರ್ಣಿಯನ್ನು ತಮ್ಮ ಮಹಾಮಂಡಲೇಶ್ವರಿಯನ್ನಾಗಿ ನೇಮಕ ಮಾಡಿತ್ತು. ವಿರೋಧದ ಬಳಿಕ ಅವರನ್ನು ತೆಗೆದು ಹಾಕಲಾಯಿತು.
‘ಮಹಾಮಂಡಲೇಶ್ವರ’ ಬಿರುದನ್ನು ಅವರಿಗೆ ನೀಡಿದ್ದಕ್ಕೆ ಅನೇಕ ಧಾರ್ಮಿಕ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ರಾಮ್ ದೇವ್ ಕೂಡ ಈ ಬಗ್ಗೆ ಅಪಸ್ವರ ತೆಗೆದಿದ್ದರು. ಗ್ಲಾಮರ್ ಲೋಕ ಹಾಗೂ ಅವರ ಬಗ್ಗೆ ಇರುವ ಕ್ರಿಮಿನಲ್ ಹಿಸ್ಟರಿ ಬಗ್ಗೆ ಅಪಸ್ವರ ತೆಗೆದಿದ್ದರು.
ಮಮತಾ ಕುಲಕರ್ಣಿ ಆರೋಪವನ್ನು ನಿರಾಕರಿಸಿದ್ದು, ‘ನಾನು ಗುರುದಕ್ಷಿಣೆ ರೂಪದಲ್ಲಿ 2 ಲಕ್ಷ ರೂಪಾಯಿ ನೀಡಿದ್ದೇನೆ. ನನ್ನೆಲ್ಲ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ. ಹೀಗಾಗಿ, ನಾನು ಬೇರೆಯವರಿಂದ ಹಣ ಪಡೆದು ಇದನ್ನು ನೀಡಿದ್ದೇನೆ’ ಎಂದು ಹೇಳಿದ್ದಾರೆ.
Click