ಕ್ರೈಂರಾಜ್ಯವೈರಲ್ ನ್ಯೂಸ್

ಶ್ರೀರಾಮಸೇನೆ ಕಾರ್ಯಕರ್ತರಿಗೆ ಬಂದೂಕು ತರಬೇತಿ ನೀಡಿದ್ದಕ್ಕಾಗಿ 27 ಮಂದಿ ವಿರುದ್ಧ ಪ್ರಕರಣ ದಾಖಲು..! ತರಬೇತಿ ನಡೆದಿದ್ದ ಜಾಗದ ಖಾಸಗಿ ಭೂ ಮಾಲಿಕನಿಂದ ದೂರು ದಾಖಲು..!

ನ್ಯೂಸ್ ನಾಟೌಟ್: ಜಮಖಂಡಿ ತಾಲೂಕಿನ ಕಾಜಿಬೀಳಗಿಯಲ್ಲಿ ಅನುಮತಿ ಇಲ್ಲದೇ ವ್ಯಕ್ತಿತ್ವ ವಿಕಸನ ಶಿಬಿರದ ಹೆಸರಿನಲ್ಲಿ ಬಂದೂಕು ತರಬೇತಿ ನೀಡಿದ ಆರೋಪದ ಮೇಲೆ 27 ಜನ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.

ಕಾಜಿಬೀಳಗಿ ಗ್ರಾಮದ ಗುಡ್ಡದ ಖಾಸಗಿ ಭೂಮಿಯಲ್ಲಿ ಕಳೆದ ಡಿ. 24ರಿಂದ 29ರ ವರೆಗೆ ಕರಾಟೆ, ಗುಡ್ಡಗಾಡು ಪ್ರಯಾಣ, ಬಂದೂಕು ತರಬೇತಿ ಸೇರಿದಂತೆ ವಿವಿಧ ಸಾಹಸಮಯ ತರಬೇತಿ ನೀಡಲಾಗಿತ್ತು. ಬಾಗಲಕೋಟೆ, ಗದಗ ಜಿಲ್ಲೆಯವರು ಎನ್ನಲಾದ ಪ್ರಕಾಶ ಪತ್ತಾರ, ಮಹೇಶ ಬಿರಾದಾರ, ಯಮನಪ್ಪ ಕೋರಿ, ಆನಂದ ಜಂಬಗಿಮಠ, ರಾಜು ಖಾನಪ್ಪನವರ, ಗಂಗಾಧರ ಕುಲಕರ್ಣಿ, ಮಹೇಶ ರೋಕಡೆ, ಮಹಾಂತೇಶ ಹೊನ್ನಪ್ಪನವರ ಸೇರಿದಂತೆ 27 ಜನ ಕಾರ್ಯಕರ್ತರು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಬಂದೂಕು ತರಬೇತಿ ನೀಡಿದ್ದಲ್ಲದೇ, ತರಬೇತಿ ಪಡೆಯುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಜನರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದರು ಎನ್ನಲಾಗಿದೆ.

ಶ್ರೀರಾಮ ಸೇನೆಯಿಂದ ಯುವಕರಿಗೆ ವ್ಯಕ್ತಿತ್ವ ವಿಕಸನ ಅಭ್ಯಾಸ ವರ್ಗ ತರಬೇತಿ, ಸೇನಾ ತರಬೇತಿ ಮಾದರಿಯಲ್ಲಿ ತರಬೇತಿ ನೀಡಲಾಗಿತ್ತು. ದಂಡ ಪ್ರಯೋಗ, ಏರ್‌ ಗನ್‌ ಮೂಲಕ ತರಬೇತಿ, ಕರಾಟೆ ಸೇರಿದಂತೆ ವಿವಿಧ ಕೌಶಲ ತರಬೇತಿ ನೀಡಲಾಗಿತ್ತು,ತರಬೇತಿ ನಡೆದ ಜಾಗದ ಮಾಲಕ ನಿಂಗಪ್ಪ ಹೂಗಾರ ಈ ಕುರಿತು ಸಾವಳಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Click

https://newsnotout.com/2025/01/kerala-misbehaviour-kannada-news-allegation-case-registered-s/
https://newsnotout.com/2025/01/naxal-surrender-issue-weapon-found-kannada-news-d/
https://newsnotout.com/2025/01/udupi-bike-and-lorry-issue-kananda-news-viral-news-hospital/

Related posts

ವಯನಾಡಿನಲ್ಲಿ ಭೂ-ಕಂಪನದ ಭೀತಿ..! 20 ಕಿಲೋಮೀಟರ್ ದೂರದಲ್ಲಿ ನಿಗೂಢ ಶಬ್ದ..!

ಸ್ಲೀಪರ್ ಕೋಚ್ ಬಸ್ ಟೆಂಪೋಗೆ ಡಿಕ್ಕಿ..! 8 ಮಕ್ಕಳು ಸೇರಿದಂತೆ 12 ಮಂದಿ ದುರ್ಮರಣ

ರೈಲಿನ ಎಂಜಿನ್ ಜೋಡಣೆಯ ವೇಳೆ ಅಪ್ಪಚ್ಚಿಯಾದ ಉದ್ಯೋಗಿ..! ಇಲ್ಲಿದೆ ವಿಡಿಯೋ