ನ್ಯೂಸ್ ನಾಟೌಟ್ : ಪೊಲೀಸರನ್ನು ನಾಯಿಂಡ ಮೋನೆ ಎಂದು ನಿಂದಿಸಿದ್ದ 6 ಮಂದಿ SDPI ಕಾರ್ಯಕರ್ತರನ್ನು ಮಂಗಳೂರಿನ ಪೊಲೀಸರು ಬಂಧಿಸಿ ಕಂಬಿ ಹಿಂದೆ ಕೂರಿಸಿದ್ದಾರೆ.
ನೌಶಾದ್, ಹೈದರಾಲಿ ಬಂಧಿತ ಮುಖ್ಯ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಿಗೆ ಆಶ್ರಯ ನೀಡಿದ ಇತರ ನಾಲ್ವರನ್ನು ಕೂಡ ಬಂಧಿಸಲಾಗಿದೆ. ಮೇ.27 ರಂದು ನಗರ ಹೊರವಲಯದ ಕಣ್ಣೂರಿನಲ್ಲಿ ನಡೆದಿದ್ದ ಎಸ್.ಡಿ.ಪಿ.ಐ ಸಮಾವೇಶಕ್ಕೆ ಬೈಕ್ ಮತ್ತು ಕಾರ್ ನಲ್ಲಿ ಬಂದ ಸವಾರ, ಸಹ ಸವಾರದಿಂದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ವಿಡಿಯೋ ವೈರಲ್ ಆಗಿತ್ತು. ಮಂಗಳೂರಿನಲ್ಲಿ ಎಸ್.ಡಿ.ಪಿ.ಐ ಸಭೆ ಗೆ ಆಗಮಿಸಿದಾಗ ಕಾರ್ಯಕರ್ತರಿಂದ ಪೊಲೀಸರಿಗೆ ನಿಂದನೆ ವಿಡಿಯೋ ಹಿನ್ನೆಲೆಯಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.