ನ್ಯೂಸ್ ನಾಟೌಟ್: ಜನ ಸಾಮಾನ್ಯರು ಬಳಸುವ ಹಲವು ಅಗತ್ಯ ಔಷಧಿಗಳ ಬೆಲೆಯನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿದೆ. ಈ ಔಷಧಿಗಳಲ್ಲಿ ಆಸ್ತಮಾ, ಕ್ಷಯ ಹಾಗೂ ಮಾನಸಿಕ ಆರೋಗ್ಯ ಸೇರಿದಂತೆ ಹಲವು ರೋಗಗಳಿಗೆ ಚಿಕಿತ್ಸೆ ನೀಡುವ ಔಷಧಿಗಳು ಸೇರಿವೆ ಎಂದು ವರದಿ ತಿಳಿಸಿದೆ.
ಔಷಧಿ ಬೆಲೆಗಳ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದೇಶದಲ್ಲಿ ಆಸ್ತಮಾ, ಗ್ಲುಕೋಮಾ (ಕಣ್ಣಿನ ಭಾಗ), ಥಲಸ್ಸೆಮಿಯಾ, ಕ್ಷಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀಡುವ ಔಷಧಿ ಬೆಲೆಯನ್ನು ಬರೋಬ್ಬರಿ ಶೇಕಡ 50 ರಷ್ಟು ಹೆಚ್ಚಳ ಮಾಡುವುದಕ್ಕೆ ಅನುಮತಿ ನೀಡಲಾಗಿದೆ.
ಭಾರತದ ಔಷಧಿ ಬೆಲೆ ಪ್ರಾಧಿಕಾರವು ಕೆಲವು ಅಗತ್ಯ ಔಷಧಿಗಳ ಬೆಲೆಯನ್ನು ಶೇ 50% ರಷ್ಟು ಹೆಚ್ಚಿಸಿದೆ. ಈ ಔಷಧಿಗಳಲ್ಲಿ ಹೆಚ್ಚಿನವು ಕಡಿಮೆ ಬೆಲೆಗೆ ಸಿಗುತ್ತಿತ್ತು. ಜನ ಸ್ನೇಹಿ ಬೆಲೆಯಲ್ಲಿಯೇ ಇದ್ದವು. ಆದರೆ, ಇದೀಗ ಔಷಧಿ ಕಂಪನಿಗಳ ಮನವಿಯ ಆಧಾರದ ಮೇಲೆ ಬೆಲೆ ಏರಿಕೆ ಮಾಡಲಾಗಿದೆ. ಕೆಲವು ಔಷಧಿಗಳ ಬೆಲೆಯನ್ನು ಹೆಚ್ಚಿಸುವಂತೆ ಔಷಧಿ ತಯಾರಿಕೆ ಕಂಪನಿಗಳು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪರಿಗಣಿಸಿ ಬೆಲೆ ಏರಿಕೆ ಮಾಡಿರುವುದಾಗಿ ಹೇಳಲಾಗಿದೆ.
ಇದಕ್ಕೆ ಔಷಧಿ ಕಂಪನಿಗಳು ನೀಡಿರುವ ಕಾರಣ ಔಷಧಿ ತಯಾರಿಕೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ ಮತ್ತು ಉತ್ಪಾದನೆ ವೆಚ್ಚವೂ ಹೆಚ್ಚಾಗಿದೆ. ಕೆಲವು ಔಷಧಿಗಳನ್ನು ಈಗ ಇರುವ ಬೆಲೆಯಲ್ಲಿ ಉತ್ಪಾದನೆ ಮಾಡುವುದು ಸವಾಲಾಗಿದೆ ಎಂದೂ ಕಂಪನಿ ಇದಕ್ಕೆ ಸಮರ್ಥನೆ ನೀಡಿದೆ.
Click