ನ್ಯೂಸ್ ನಾಟೌಟ್: ಅಪಘಾತದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೃತಪಟ್ಟ ಘಟನೆ ನಡೆದಿತ್ತು. ಆತನ ಮೇಲೆ ಕಾರು ಹರಿಸಿದ್ದು ಮಹಿಳಾ ಪೊಲೀಸ್ ಪೇದೆ ಎಂದು ತನಿಖೆಯಲ್ಲಿ ಬಯಲಾಗಿದೆ.
ಈ ಅಪಘಾತ ಸಂಭವಿಸಿದ ಕೂಡಲೇ ಮಹಿಳಾ ಪೊಲೀಸ್ ಪೇದೆ ತನ್ನ ಪ್ರಿಯಕರನ ಜೊತೆಗೆ ಪೊಲೀಸ್ ಠಾಣೆಗೆ ಧಾವಿಸಿದಳು. ತಾನು ಚಲಾಯಿಸುತ್ತಿದ್ದ ಕಾರು ಹರಿದು ಸಬ್ ಇನ್ಸ್ಪೆಕ್ಟರ್ ದಿಪಂಕರ್ ಗೌತಮ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು. ಆದರೆ, ಪೊಲೀಸರಿಗೆ ಮಾತ್ರ ಇದೊಂದು ಸರಳ ಅಪಘಾತ ಪ್ರಕರಣವಲ್ಲ ಅನ್ನೋ ಅನುಮಾನ ಬಂದಿತ್ತು.
ಎಸ್ಐ ಗೌತಮ್ ಅವರು ಹೆದ್ದಾರಿಯಲ್ಲಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಪಲ್ಲವಿ ಅವರ ಕಾರು ಗೌತಮ್ಗೆ ಗುದ್ದಿತು. ಕಾರು ಗುದ್ದಿದ ರಭಸಕ್ಕೆ ಗೌತಮ್ ಅವರು ಕಾರಿನ ಬಾನೆಟ್ ಹಾಗೂ ವಿಂಡ್ ಶೀಲ್ಡ್ ಮೇಲೆ ಬಿದ್ದರು. ನಂತರ ಕಾರಿನ ಮುಂಭಾಗಕ್ಕೆ ಬಿದ್ದ ಗೌತಮ್ ಅವರನ್ನು ಸುಮಾರು 30 ಮೀಟರ್ ದೂರದವರೆಗೆ ರಸ್ತೆಯಲ್ಲೇ ಉಜ್ಜಿಕೊಂಡು ಹೋದ ಕಾರು, ಆತನ ದೇಹವನ್ನು ನಜ್ಜುಗುಜ್ಜು ಮಾಡಿತ್ತು.
ಸ್ಥಳೀಯರು ಮೃತ ಎಸ್ಐ ಗೌತಮ್ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು. ಅಷ್ಟರಲ್ಲಾಗಲೇ ಜೀವ ಬಿಟ್ಟಿದ್ದ ಎಸ್ಐ ಗೌತಮ್ ಅವರ ದೇಹ ಶವಾಗಾರ ಸೇರಿತ್ತು.
ಮಹಿಳಾ ಪೇದೆ ಪಲ್ಲವಿ ಹಾಗೂ ಕರಣ್ ಠಾಕೂರ್ ಎಂಬಾತನ ಜೊತೆಗೆ ಸಾಕಷ್ಟು ವರ್ಷಗಳಿಂದ ಪ್ರೇಮ ಸಂಬಂಧ ಇತ್ತು. ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಆಗಿತ್ತು. ಕರಣ್ ಠಾಕೂರ್ ಪಿಸ್ತೂಲಿನಿಂದ ಪಲ್ಲವಿ ಮೇಲೆ ಗುಂಡು ಹಾರಿಸಿದ್ದ. ಈ ಗುಂಡು ಪಲ್ಲವಿ ಅವರ ಕುತ್ತಿಗೆಯನ್ನು ಸವರಿಕೊಂಡು ಹೋಗಿತ್ತು. ಆಕೆಗೆ ಗಾಯವಾಗಿತ್ತು. ಈ ವೇಳೆ ಪಲ್ಲವಿ ಅವರ ರಕ್ಷಣೆಗೆ ನಿಂತಿದ್ದ ಎಸ್ಐ ಗೌತಮ್, ಅವರ ಪರ ಸಹಾನುಭೂತಿ ಹಾಗೂ ಅನುಕಂಪ ಹೊಂದಿದ್ದ. ಕೆಲ ದಿನಗಳಲ್ಲೇ ಅವರ ಮಧ್ಯೆ ಪ್ರೇಮಾಂಕುರವೂ ಆಗಿತ್ತು. ಅಷ್ಟರಲ್ಲಿ ಪಲ್ಲವಿ ಅವರ ಬಾಳಲ್ಲಿ ಮತ್ತೆ ಕರಣ್ ಠಾಕೂರ್ ಪ್ರವೇಶವಾಗಿತ್ತು. ಆತ ಪಲ್ಲವಿಯ ಮನವೊಲಿಸಿ ಮತ್ತೆ ತನ್ನ ಪ್ರೇಮ ಸಂಬಂಧ ಸರಿಪಡಿಸಿಕೊಂಡಿದ್ದ.
ಈ ವೇಳೆ ಒಂಟಿಯಾದ ಎಸ್ಐ ಗೌತಮ್, ತಮ್ಮ ಮನದಾಳವನ್ನು ಎಸ್ಐ ಸುಭಾಷ್ ಬಳಿ ಹೇಳಿಕೊಂಡಿದ್ದ. ಪಲ್ಲವಿ ಹಾಗೂ ಕರಣ್ ಮತ್ತೆ ಒಂದಾಗಿದ್ದಾರೆ. ಇವರಿಬ್ಬರೂ ಸೇರಿ ನನಗೆ ಹಾನಿ ಮಾಡಬಹುದು ಎಂದೂ ಅಂದಾಜಿಸಿದ್ದ. ಆತನ ಅಂದಾಜು ನಿಜವಾಗಿತ್ತು. ಹಾಗಂತಾ ಎಸ್ಐ ಗೌತಮ್ ಕೂಡಾ ಭಾರೀ ಉತ್ತಮ ವ್ಯಕ್ತಿಯೇನೂ ಆಗಿರಲಿಲ್ಲ. ಆತನ ಮೇಲೆ ಈ ಹಿಂದೆಯೇ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಆದರೆ ನ್ಯಾಯಾಲಯದಲ್ಲಿ ಸಾಬೀತಾಗಿರಲಿಲ್ಲ. ಇಬ್ಬರು ಪ್ರೇಮಿಗಳ ನಡುವೆ ಬಂದ ಎಸ್ಐ ಕೊಲೆಯಾಗಿ ಹೋಗಿದ್ದಾರೆ. ಆರೋಪಿಗಳಿಗೆ ಜೈಲಾಗಿದ.
ಮಧ್ಯ ಪ್ರದೇಶ ರಾಜ್ಯದ ರಾಜ್ಘರ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ರಾಜಘರ್ ಮೀಸಲು ಪೊಲೀಸ್ ಲೇನ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ದಿಪಂಕರ್ ಗೌತಮ್ ಹತ್ಯೆಗೀಡಾದವರು. ಅವರ ಮೇಲೆ ಕಾರು ಚಲಾಯಿಸಿದ್ದು, ಸಮೀಪದ ಪಚೌರ್ ಎಂಬ ಪೊಲೀಸ್ ಠಾಣೆಯ ಮಹಿಳಾ ಪೇದೆ ಪಲ್ಲವಿ ಸೋಲಂಕಿ ಎಂಬಾಕೆ. ಈ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ರಂಗ ಪ್ರವೇಶ ಮಾಡಿದ ಎಸ್ಪಿ ಆದಿತ್ಯ ಮಿಶ್ರಾ, ರಾತ್ರೋರಾತ್ರಿ ಪಲ್ಲವಿ ಹಾಗೂ ಕರಣ್ನನ್ನ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಇದು ಕೇವಲ ಅಪಘಾತವಲ್ಲ, ಲವ್ ಟ್ರಯಾಂಗಲ್ ಕೇಸ್ ಎನ್ನುವುದು ಬಯಲಾಗಿದೆ.
Click