ನ್ಯೂಸ್ ನಾಟೌಟ್: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮೇ.2 ರಿಂದ 9ರವರೆಗೆ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ನೀಲೇಶ್ವರ ಎಡಮನೆಯ ಬ್ರಹ್ಮಶ್ರೀ ಕೆ.ಯು ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಆ ಪ್ರಯುಕ್ತ ಮೇ 6 ರಂದು ಬೆಳಗ್ಗೆ ಧನ್ವಂತರಿ ಯಾಗ ಹಾಗೂ ಕೊಕ್ಕಡ ಪಟ್ಲಡ್ಕದಿಂದ ಶ್ರೀ ದೇವಳಕ್ಕೆ ನೂತನ ಕೊಡಿಮರ ಮೆರವಣಿಗೆ ನಡೆಯಿತು. ಮಧ್ಯಾಹ್ನ 2 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ ಬಾಲಕೃಷ್ಣ ಕೆದಿಲಾಯ, ಪವಿತ್ರಪಾಣಿ ಯಂ ರಾಧಾಕೃಷ್ಣ ಯಡಪಡಿತ್ತಾಯ ಹಾಗೂ ಅರ್ಚಕ ವೃಂದ, ನೌಕರವೃಂದ ಮತ್ತು ಊರ ಪರವೂರ ಭಕ್ತಾಧಿಗಳು ಭಾಗಿಯಾಗಿದ್ದರು. ಮೇ 7 ರಂದು ಬೆಳಗ್ಗೆ ಉತ್ಸವ ಹೊರಟು ಚಂದ್ರಮಂಡಲ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ರಾತ್ರಿ 8 ಗಂಟೆಗೆ ಉತ್ಸವ ಹೊರಟು ಮಹಾರಥೋತ್ಸವ ನಡೆಯಲಿದೆ.