ನ್ಯೂಸ್ ನಾಟೌಟ್: ಉಡುಪಿ ಜಿಲ್ಲೆಯ ಕಾರ್ಕಳ ದ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಅಭಯ್ ಎಂಬ ಈತ ಅತ್ಯಾಚಾರಿ ಅಲ್ತಾಫ್ ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೀಗ 3ನೇ ಆರೋಪಿ ಅಭಯ್ ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಭಯ್ ಫೇಸ್ಬುಕ್ನಲ್ಲಿ MLA ಸುನೀಲ್ಕುಮಾರ್ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ಇನ್ನು ಕಳೆದ ತಿಂಗಳು ಬಜರಂಗದಳ ಡ್ರಗ್ಸ್ ವಿರೋಧಿ ಅಭಿಯಾನ ನಡೆಸಿತ್ತು. ಈ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಆರೋಪಿ ಅಭಯ್ ಕೂಡ ಭಾಗಿಯಾಗಿದ್ದ. ಅಭಿಯಾನದ ಕೊನೇಯ ಹಂತವಾಗಿ ಕಾರ್ಕಳ DySPಗೆ ಮನವಿ ನೀಡುವ ಸಮಯದಲ್ಲಿಯೂ ಜೊತೆಗಿದ್ದ. ಪ್ರಮುಖ ಆರೋಪಿ ಅಲ್ತಾಫ್ಗೆ ಡ್ರಗ್ಸ್ ಪೂರೈಸಿದ್ದ ಅಭಯ್ನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
Click