ನ್ಯೂಸ್ ನಾಟೌಟ್ : ಬೈಕ್ಗಳಿಗೆ ದುಬಾರಿ ಬೆಲೆಯ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡು ಕರ್ಕಶ ಶಬ್ದದ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದ 150ಕ್ಕೂ ಹೆಚ್ಚು ಬೈಕ್ ಸೈಲೆನ್ಸರ್ಗಳನ್ನು ರೋಡ್ ರೋಲರ್ನಿಂದ ನಾಶಪಡಿಸುವ ಮೂಲಕ ಕೋಲಾರ ಪೊಲೀಸರು ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ.ಈ ವೇಳೆ ಹೆಲ್ಮೆಟ್ ಹಾಕದ ಪೊಲೀಸರಿಗೂ ದಂಡ ಹಾಕಿದ್ದೇವೆ ಎಂದು ಎಸ್.ಐ ನಿಖಿಲ್ ತಿಳಿಸಿದ್ದಾರೆ.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರ ನಿರ್ದೇಶನದಂತೆ ನಗರದ ಅಮ್ಮವಾರಿಪೇಟೆ ವೃತ್ತದ ರಸ್ತೆಯಲ್ಲಿ ಕರ್ಕಶ ಶಬ್ದ ಮಾಡುವಂತಹ 6.50 ಲಕ್ಷ ರೂಪಾಯಿ ಮೌಲ್ಯದ 150ಕ್ಕೂ ಹೆಚ್ಚು ಬೈಕ್ ಗಳ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ನಾಶಪಡಿಸಲಾಯಿತು. ಇದೇ ವೇಳೆ ರಸ್ತೆಗಳಲ್ಲಿ ಬೈಕ್ ವೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಎಸ್ ಪಿ ನಿಖಿಲ್ ನೀಡಿದ್ದಾರೆ ಎನ್ನಲಾಗಿದೆ.
ಎಸ್ ಪಿ ನಿಖಿಲ್ ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಕೋಲಾರ ಜಿಲ್ಲೆಯಲ್ಲಿ ಕರ್ಕಶ ಸೈಲೆನ್ಸರ್ ಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದೆವು. ಕೋಲಾರ ಮತ್ತು ಮುಳಬಾಗಿಲು ಭಾಗದಲ್ಲಿ 150ಕ್ಕೂ ಹೆಚ್ಚು ಸೈಲೆನ್ಸರ್ ಗಳನ್ನು ಜಪ್ತಿ ಮಾಡಿದ್ದೆವು. ಬೈಕ್ ಗಳಿಗೆ ಎಷ್ಟು ಲಿಮಿಟ್ ಇರುತ್ತೋ ಅಷ್ಟೇ ಶಬ್ದ ಬರುವ ಸೈಲೆನ್ಸರ್ ಇರಬೇಕು. ಅತಿ ಹೆಚ್ಚಿಗೆ ಶಬ್ದ ಬರುವಂತಹ ಸೈಲೆನ್ಸರ್ ಗಳಿಂದ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕರ್ಕಶ ಸೈಲೆನ್ಸರ್ ಗಳ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಹೆಲ್ಮೆಟ್ ಹಾಕದ ಪೊಲೀಸರಿಗೂ ದಂಡ ಹಾಕಿದ್ದೇವೆ. ಹಾಗಾಗಿ ಯಾರೇ ಆಗಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
Click