ನ್ಯೂಸ್ ನಾಟೌಟ್: ಗುಜರಾತ್ ಪೊಲೀಸರು ಇತ್ತೀಚೆಗೆ ವಾಪಿ ಎಂಬಲ್ಲಿ ನಡೆದ 1 ಲಕ್ಷ ರೂಪಾಯಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ರೋಹಿತ್ ಕನುಭಾಯಿ ಸೋಲಂಕಿ ಎಂಬ ಕಳ್ಳನನ್ನು ಬಂಧಿಸಿದ್ದರು. ಬಳಿಕ ಕಳ್ಳನ ಹಿನ್ನೆಲೆ ಕೇಳಿ ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಪೊಲೀಸರು ರೋಹಿತ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ರೋಹಿತ್ ಇದುವರೆಗೆ 19 ದರೋಡೆಗಳನ್ನು ಮಾಡಿದ್ದಾನೆ. ಐಷಾರಾಮಿ ಜೀವನಶೈಲಿಯನ್ನು ಹೊಂದಿದ್ದಾನೆ. ಇದಲ್ಲದೆ ಈತ ಮುಂಬೈನ ಮುಂಬ್ರಾ ಪ್ರದೇಶದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅದ್ದೂರಿ ಫ್ಲಾಟ್ನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈತ ದುಬಾರಿ ಆಡಿ ಕಾರನ್ನು ಓಡಿಸುತ್ತಿದ್ದ ಎನ್ನಲಾಗಿದೆ. ತೆಲಂಗಾಣದಲ್ಲಿ ಎರಡು, ಆಂಧ್ರಪ್ರದೇಶದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಎರಡು ಮತ್ತು ಮಹಾರಾಷ್ಟ್ರದಲ್ಲಿ ಒಂದು ಕಳ್ಳತನ ಮಾಡಿದ್ದಾನೆ. ಇದರ ಜೊತೆಗೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಲಂಚ ನೀಡಿ ಇನ್ನೂ ಆರು ಕಳ್ಳತನ ಮಾಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಳ್ಳತನ ಮಾಡಲು ಈತ ಐಷಾರಾಮಿ ಹೋಟೆಲ್ಗಳಲ್ಲಿ ತಂಗುತ್ತಿದ್ದ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಹಗಲಿನಲ್ಲಿ ಹೋಟೆಲ್ ಕ್ಯಾಬ್ಗಳನ್ನು ಬುಕ್ ಮಾಡುತ್ತಿದ್ದ. ಕಳ್ಳತನವನ್ನು ಯೋಜಿಸಲು ಹಗಲಿನಲ್ಲಿ ತಿರುಗಾಡಿ ಸ್ಥಳವನ್ನು ಗುರುತು ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಮುಂಬೈನ ಡ್ಯಾನ್ಸ್ ಬಾರ್ ಮತ್ತು ನೈಟ್ಕ್ಲಬ್ಗಳಲ್ಲಿ ಪಾರ್ಟಿ ಮಾಡುತ್ತಿದ್ದ. ಈತ ಮಾದಕ ವ್ಯಸನಿಯೂ ಆಗಿದ್ದು, ಅದಕ್ಕಾಗಿ ತಿಂಗಳಿಗೆ 1.50 ಲಕ್ಷ ರೂ. ವ್ಯಯಿಸುತ್ತಿದ್ದ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
Click 👇