ನ್ಯೂಸ್ ನಾಟೌಟ್: ಡಿಎಸ್ಪಿಯೊಬ್ಬರು ಮಹಿಳಾ ಪೊಲೀಸ್ ಪೇದೆ ಜೊತೆ ಲಾಡ್ಜ್ ವೊಂದರಲ್ಲಿ ಸಿಕ್ಕಿಬಿದ್ದು, ತನ್ನ ಉನ್ನತ ಹುದ್ದೆಯಿಂದೆ ಕೆಳದರ್ಜೆಯ ಪೊಲೀಸ್ ಪೇದೆ ಹುದ್ದೆಗೆ ಹಿಂಬಡ್ತಿ ಪಡೆದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉನ್ನಾವೋದ ಬಿಘಪುರ್ ಠಾಣೆಯಲ್ಲಿ ಶಂಕರ್ ಕನೌಜಿಯಾ ಎಂಬವರು ಮೊದಲು ಸರ್ಕಲ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಡಿಎಸ್ಪಿ ಆಗಿ ಬಡ್ತಿ ಪಡೆದಿದ್ದರು. ಡಿಎಸ್ಪಿ ಆಗಿ ಹುದ್ದೆಗೇರಿದ ಬಳಿಕ ಅವರು ಮಹಿಳಾ ಪೇದೆಯೊಬ್ಬರ ಜೊತೆ ಸಂಬಂಧ ಇರಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಡಿಎಸ್ಪಿ ಶಂಕರ್ ಕನೌಜಿಯಾ ತನಗೆ ಕೌಟುಂಬಿಕ ವಿಚಾರದ ಕಾರಣದಿಂದ ತುರ್ತಾಗಿ ಒಂದು ವಾರದ ರಜೆ ಬೇಕಾಗಿದೆ ಎಂದು ರಜೆಯನ್ನು ತೆಗೆದುಕೊಂಡಿದ್ದರು. ರಜೆ ತೆಗೆದುಕೊಂಡು ಮನೆಗೆ ಹೋಗುವ ಬದಲು ಮಹಿಳಾ ಪೇದೆ ಜೊತೆ ನೇರವಾಗಿ ಕಾನ್ಪುರದ ಹೊಟೇಲ್ ವೊಂದರಲ್ಲಿ ತೆರಳಿ ಚೆಕ್ ಇನ್ ಆಗಿದ್ದಾರೆ ಎನ್ನಲಾಗಿದೆ.. ಈ ವೇಳೆ ತನ್ನ ಎರಡು ಮೊಬೈಲ್ ಫೋನ್ ನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಇತ್ತ ಗಂಡ ಮನೆಗೆ ಬಾರದೇ ಇರುವುದರಿಂದ ಶಂಕರ್ ಅವರಿಗೆ ಪತ್ನಿ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಬರುತ್ತಿರುವ ಕಾರಣದಿಂದ ಗಾಬರಿಗೊಂಡ ಪತ್ನಿ ಉನ್ನಾವೋ ಠಾಣೆಗೆ ಕರೆ ಮಾಡಿದ್ದಾರೆ.
ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು, ಶಂಕರ್ ಅವರ ಮೊಬೈಲ್ ನೆಟ್ ವರ್ಕ್ ಜಾಡನ್ನು ಪತ್ತೆ ಮಾಡಿಕೊಂಡು ಕಾನ್ಪುರ ಹೊಟೇಲ್ ಗೆ ತೆರಳಿದ್ದಾರೆ. ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ಹೊಟೇಲ್ ಕೋಣೆಯತ್ತ ತೆರಳಿದಾಗ ಶಂಕರ್ ಹಾಗೂ ಮಹಿಳಾ ಪೇದೆ ಕೋಣೆಯಲ್ಲಿ ಅಸಭ್ಯ ಭಂಗಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಬಳಿಕ ಪೊಲೀಸರು ವರದಿ ತಯಾರಿಸಿ ಎಡಿಜಿಗೆ ನೀಡಿದ್ದಾರೆ. ಇದೀಗ ಸರ್ಕಾರ ವರದಿಯನ್ನು ಪರಿಶೀಲಿಸಿ ಶಂಕರ್ ಅವರನ್ನು ಹಿಂಬಡ್ತಿಯ ಶಿಕ್ಷೆ ನೀಡಲು ಶಿಫಾರಸು ಮಾಡಿದೆ. ಅದರಂತೆ ಡಿಎಸ್ಪಿ ಕೃಪಾ ಶಂಕರ್ ಕನೌಜಿಯಾ ಕೆಳ ದರ್ಜೆ ಪೊಲೀಸ್ ಪೇದೆಯಾಗಿ ಹಿಂಬಡ್ತಿ ಶಿಕ್ಷೆ ಪಡೆದಿದ್ದಾರೆ. ಆದರೆ, 2021ರಲ್ಲಿ ನಡೆದ ಈ ಪ್ರಕರಣಕ್ಕೆ ಈಗ (ಜೂನ್.22.2024) ಇಷ್ಟು ಕಡಿಮೆ ಪ್ರಮಾಣದ ಶಿಕ್ಷೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.
Click 👇