ನ್ಯೂಸ್ ನಾಟೌಟ್: ವಿಪತ್ತು ನಿರ್ವಹಣಾ ತಂಡದ ಜೊತೆ ಪೊಲೀಸರು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಸುಳ್ಯ ಪೊಲೀಸ್ ಠಾಣೆಯಲ್ಲಿ ಇಂದು(ಜೂ.23) ಹಮ್ಮಿಕೊಳ್ಳಲಾಗಿತ್ತು.
ವಿಪತ್ತು ನಿರ್ವಹಣಾ ಸದಸ್ಯರನ್ನು ಠಾಣೆಗೆ ಕರೆಸಿ ಪಿ.ಎಸ್.ಐ ಸರಸ್ವತಿಯವರ ನೇತೃತ್ವದಲ್ಲಿ ತುರ್ತು ಸಂದರ್ಭಗಳಲ್ಲಿ ತಂಡದ ಸದಸ್ಯರು ಏನೇನು ಕರ್ತವ್ಯಗಳನ್ನು, ಹೇಗೆ ನಿರ್ವಹಿಸಬೇಕು, ಹೇಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಯಿತು.
ಮಳೆಗಾಲದಲ್ಲಿ ನಡೆಯುವ ಸಂಭವನೀಯ ಅನಾಹುತಗಳನ್ನು ತಪ್ಪಿಸಲು ಹೇಗೆ ಸಜ್ಜಾಗಬೇಕು, ಯಾವ ಪರಿಕರಗಳನ್ನು ಬಳಸಬೇಕು ಮತ್ತು ಘಟನೆಗೆ ಸಂಬಂಧಪಟ್ಟ ಸೂಕ್ತ ಇಲಾಖೆಗಳ ನಿರ್ದೇಶನಗಳನ್ನು ಪಡೆದು ಹೇಗೆ ಕಾರ್ಯನಿರ್ವಹಿಸಬೇಕೆಂದು ಸೂಚನೆಗಳನ್ನು ನೀಡಲಾಯಿತು. ಜೊತೆಗೆ ಅರಣ್ಯ ಇಲಾಖೆ, ಅಗ್ನಿಶಾಮಕ, ಕಂದಾಯ, ಪೊಲೀಸ್ ಇಲಾಖೆ ಮುಂತಾದ ಇಲಾಖೆಗಳ ಜೊತೆಗೆ ನಿಕಟ ಸಂಪರ್ಕ ಇರಿಸಿಕೊಂಡು, ಯಾವುದೇ ಘಟನೆಗಳು ನಡೆದಾಗ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕಾರ್ಯಾಚರಣೆ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ.