ಕ್ರೈಂಸುಳ್ಯ

ಗುತ್ತಿಗಾರು: ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆ ಆತ್ಮಹತ್ಯೆಗೆ ಶರಣು, ಮಗ, ಸೊಸೆ ತೀರಿಕೊಂಡ ಬಳಿಕ ಆಕೆಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಗುತ್ತಿಗಾರಿನ ಅಡ್ಡನಪಾರೆಯ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ. ಮೃತರನ್ನು ಗಿರಿಜಾ (70 ವರ್ಷ) ಎಂದು ಗುರುತಿಸಲಾಗಿದೆ. ಸದ್ಯ ಅವರ ಮೃತ ದೇಹವನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ. ಇನ್ನಷ್ಟೇ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ ಎನ್ನಲಾಗಿದೆ.

ಗಿರಿಜಾ ಅವರು ತಮ್ಮ ಮಗನನ್ನು ಕಳೆದುಕೊಂಡಿದ್ದರು. ಬಳಿಕ ಸೊಸೆಯು ಕೂಡ ನಿಧನರಾಗಿದ್ದರು. ಇದಾದ ಬಳಿಕ ಅವರು ತಮ್ಮವರಿಲ್ಲದೆ ಅನಾಥರಾಗಿದ್ದರು. ಇದರಿಂದ ಬಹಳಷ್ಟು ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೂ.8 ರಂದು ಅವರು ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ದೊರಕಿದೆ.

ಸಂಬಂಧಿಕರು ಇವರನ್ನು ವಿಚಾರಿಸಲು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಆಂಬ್ಯುಲೆನ್ಸ್ ಮೂಲಕ ಸುಳ್ಯಕ್ಕೆ ಕರೆ ತರಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಕುಟುಂಬಸ್ಥರೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

Click 👇

https://newsnotout.com/2024/06/narendra-modi-oath-taking-invited-to-pejawar-shri
https://newsnotout.com/2024/06/the-python-issue-in-indonesia-kannada-news-women
https://newsnotout.com/2024/06/annamalai-becomes-mp-even-he-lost-in-election

Related posts

15 ವರ್ಷದ ಹುಡುಗನನ್ನು ಮದುವೆಯಾದ 3 ಮಕ್ಕಳ ತಾಯಿ..! ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ಹೀಗಾಗಿಯೇ ಆತನನ್ನು ಬಿಟ್ಟು ಬಂದಿದ್ದೇನೆ ಎಂದ ಆಕೆ..!

5 ತಿಂಗಳ ಹಸುಗೂಸಿನ ದುರಂತ ಅಂತ್ಯ..! ಕರುಳ ಕುಡಿಗೆ ವಿಷವುಣಿಸಿದಳೇ ತಾಯಿ? ಏನಿದು ಅಮಾನವಿಯ ಘಟನೆ?

ಕೊಟ್ಟಿಗೆಯಲ್ಲಿದ್ದ 9 ಆಡುಗಳ ಕತ್ತುಕೊಯ್ದು 27 ಆಡುಗಳನ್ನು ಹೊತ್ತೊಯ್ದ ದುಷ್ಕರ್ಮಿಗಳು..!, ವಿಕೃತಿ ಮೆರೆದ ಕಿಡಿಗೇಡಿಗಳು..!