ಕರಾವಳಿ

ಕಾರ್ಕಳ: ಮುಂದಿನ ನಾಲ್ಕು ತಿಂಗಳ ಒಳಗಾಗಿ ‘ಪರಶುರಾಮ್ ಥೀಂ ಪಾರ್ಕ್’ ಕಾಮಗಾರಿ ಮುಗಿಸೋಕೆ ಹೈಕೋರ್ಟ್ ಆದೇಶ, ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ವಿಚಾರಕ್ಕೆ ಈಗ ಬಿಗ್ ಟ್ವಿಸ್ಟ್..!

ನ್ಯೂಸ್ ನಾಟೌಟ್: ಕಾರ್ಕಳದ ಅಭಿವೃದ್ಧಿಯ ಕೈಗನ್ನಡಿಯಾಗಿರುವ ‘ಪರಶುರಾಮ್ ಥೀಂ ಪಾರ್ಕ್’ ಬಗ್ಗೆ ಹರಡಿದ್ದ ಎಲ್ಲ ಗೊಂದಲಕ್ಕೆ ತೆರೆ ಬೀಳುವ ಸಮಯ ಸನ್ನಿಹಿತವಾಗಿದೆ. ‘ಪರಶುರಾಮ್ ಥೀಂ ಪಾರ್ಕ್’ ವಿವಾದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಂದಿನ ನಾಲ್ಕು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಉಡುಪಿ ನಿರ್ಮಿತಿ ಕೇಂದ್ರಕ್ಕೆ ‘ಹೈ’ ನಿರ್ದೇಶನ ನೀಡಿದೆ.

ಪರಶುರಾಮನ ಪ್ರತಿಮೆ ಕಂಚಿನದ್ದಲ್ಲ ಅದು ನಕಲಿ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಸಹಿತ ಚರ್ಚೆ ಮಾಡಿದ್ದರು. ಕಾರ್ಕಳದ ಅಭಿವೃದ್ಧಿಯನ್ನು ಸಹಿಸದ ಕಿಡಿಗೇಡಿಗಳು ಇಂತಹ ಕೃತ್ಯ ಮಾಡಿದ್ದಾರೆಂದು ಹಾಲಿ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಪರಶುರಾಮನ ಪ್ರತಿಮೆ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯ್ಕ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ.ಮೂ.ಎಂ.ನಾಗಪ್ರಸನ್ನ ಈ ಆದೇಶ ನೀಡಿದ್ದಾರೆ. ಇದರೊಂದಿಗೆ ಕಳೆದೊಂದು ವರ್ಷದಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ತಾವು ಕಂಚಿನ ಪ್ರತಿಮೆಯನ್ನೇ ನಿರ್ಮಿಸಿದ್ದು, ಬಾಕಿ ಕೆಲಸ ಪೂರ್ಣಗೊಳಿಸುವುದಕ್ಕೆ ಸೂಕ್ತ ಭದ್ರತೆ ಹಾಗೂ ಅನುಕೂಲಕರ ವಾತಾವರಣ ನಿರ್ಮಿಸಿಕೊಡುವಂತೆ ಕೃಷ್ಣ ನಾಯ್ಕ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಪ್ರಕಟಗೊಂಡ ನಾಲ್ಕು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಆದೇಶ ನೀಡಿದೆ. ಇದೆಲ್ಲದರ ನಡುವೆ ಅಂದು ಟೀಕೆ ಮಾಡಿದ್ದ ಕಾಂಗ್ರೆಸ್ ಸರ್ಕಾರ ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

Related posts

ಕೇವಲ ಒಂದು ಸಾವಿರ ರುಪಾಯಿಗೆ ಸ್ವಂತ ಮನೆಯನ್ನು ಗೆಲ್ಲಬೇಕೆ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ, ಕೇವಲ ಮಾಸಿಕ ಒಂದು ಸಾವಿರ ರುಪಾಯಿಗೆ ನಿಮಗೂ ಗೆಲ್ಲಬಹುದು ಸ್ವಂತ ಮನೆ; ಜೊತೆಗೆ ಐಶಾರಾಮಿ ಕಾರು, ಸುಸಜ್ಜಿತ ಜಾಗ ಹೀಗೆ ಬಹುಮಾನಗಳ ಸುರಿಮಳೆ

ಗೂನಡ್ಕ:ಕಾರು ಮತ್ತು ಲಾರಿ ಮಧ್ಯೆ ಅಪಘಾತ,ಸಂಪಾಜೆಯ ವ್ಯಕ್ತಿಗೆ ಗಂಭೀರ ಗಾಯ

ಉಡುಪಿ: ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಜ್ಯುವೆಲ್ಲರಿ ಸಿಬ್ಬಂದಿಯ ಮೃತದೇಹ ಬಾವಿಯಲ್ಲಿ ಪತ್ತೆ..! ರಾತ್ರಿ ಮನೆಯಲ್ಲಿ ನನಗೆ ಹೆದರಿಕೆ ಆಗುತ್ತದೆ, ಈಗ ಬರುತ್ತೇನೆಂದು ಹೇಳಿ ಹೋಗಿದ್ದ ವ್ಯಕ್ತಿ..!