ನ್ಯೂಸ್ ನಾಟೌಟ್: ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಜತೆ ನಟಿಸಿದ್ದ ಬಾಲನಟಿ ಇಂದು ಐಎಎಸ್ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. 90ರ ದಶಕದ ಕನ್ನಡ ಚಿತ್ರಗಳಲ್ಲಿ ಕೀರ್ತನಾ ಎಂಬ ಬಾಲನಟಿ ಪರಿಚಯವಿರಬಹುದು.
ಕರ್ಪೂರದ ಗೊಂಬೆ, ಗಂಗಾ ಯಮುನ, ಮುದ್ದಿನ ಅಳಿಯ, ಉಪೇಂದ್ರ ಸರ್ಕಲ್ ಇನ್ಸ್ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ಸಿಂಹಾದ್ರಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಪುಟಾಣಿಯಾಗಿ ಕಾಣಿಸಿಕೊಂಡಿದ್ದರು ಇದೇ ಕೀರ್ತನಾ. ಮತ್ತು ಟಿವಿ ಧಾರಾವಾಹಿಗಳಲ್ಲೂ ಕೂಡಾ ಕಾಣಿಸಿಕೊಂಡಿದ್ದಾರೆ. ಈಗ ಕೀರ್ತನಾ ಅವರು UPSC CSE 2020 ರಲ್ಲಿ AIR ರ್ಯಾಂಕ್ 167 ಅನ್ನು ಪಡೆದು ಇಂದು ಐಎಎಸ್ ಆಫೀಸರ್ ಆಗಿದ್ದಾರೆ. ಭಾರತದ ಅತ್ಯಂತ ಕಠಿಣ ಪರೀಕ್ಷೆ ಪಾಸ್ ಮಾಡಿದ ಹೆಗ್ಗಳಿಕೆ ಇವರದ್ದು.
ತನ್ನ UPSC CSE ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಕೀರ್ತನಾ 2011 ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಿದ್ದರು. ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಮತ್ತೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸತೊಡಗಿದರು. 6ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಕೀರ್ತನಾ IAS ಅಧಿಕಾರಿಯಾಗಿ ತಮ್ಮ ಮೊದಲ ಪೋಸ್ಟಿಂಗ್ನಲ್ಲಿ, ಮಂಡ್ಯ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಆಡಳಿತಾತ್ಮಕ ಪಾತ್ರವನ್ನು ವಹಿಸಿಕೊಂಡರು. ಅಂದು ಬಾಲನಟಿಯಾಗಿ ಸಾಲು..ಸಾಲು ಸಿನಿಮಾ ಮಾಡಿದ್ದ ನಟಿ ಇಂದು ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.