ಸುಳ್ಯ

ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಗೆ ಮತ್ತೊಂದು ಗರಿ, ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಡಾ. ಲೀಲಾಧರ್ ಡಿ.ವಿ ನೇಮಕ

ನ್ಯೂಸ್ ನಾಟೌಟ್: ಸದಾ ಒಂದಿಲ್ಲೊಂದು ವಿಚಾರದಲ್ಲಿ ಸದ್ದು ಮಾಡುತ್ತಿರುವ ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಂಸ್ಥೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ ಇದೀಗ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಡಾ. ಲೀಲಾಧರ್ ಡಿ.ವಿ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಸಮೀಪದವರು. ಬಾಲ್ಯದಿಂದಲೇ ಛಲವಾದಿಯಾಗಿರುವ ಡಾ. ಲೀಲಾಧರ್ ಡಿ.ವಿ ವಿವಿಧ ಕಾರ್ಯಕ್ರಮಗಳಲ್ಲಿ ಹಂತಹಂತವಾಗಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡವರು. ಹಿಡಿದ ಕೆಲಸವನ್ನು ಅತ್ಯಂತ ನಾಜೂಕಾಗಿ ಮುಗಿಸುವ ಸ್ವಭಾವದವರು. ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಬೆಳವಣಿಗೆಯಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸಿಕೊಂಡು ಬಂದಿದ್ದಾರೆ. ಪ್ರತಿಯೊಬ್ಬ ಸಿಬ್ಬಂದಿಯ ಕಷ್ಟಕ್ಕೂ ಅವರು ಕ್ಷಿಪ್ರವಾಗಿ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ.

ಡಾ.ಲೀಲಾಧರ್ ಡಿ.ವಿ 1996ರಿಂದ 2001ರ ತನಕ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬಿ.ಎ.ಎಂ.ಎಸ್ ಪೂರೈಸಿದ್ದರು. ಪ್ರತಿಭಾವಂತರಾಗಿದ್ದ ಅವರು 2005ರಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಬಳಿಕ ತಾನು ಕಲಿತ ವಿದ್ಯಾಲಯದಲ್ಲಿಯೇ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದರು. 2010ರಿಂದ ಕಾಲೇಜಿನ ಆಡಳಿತಾಧಿಕಾರಿಯಾಗಿ ಮತ್ತು ಅಸೋಸಿಯೇಟ್ ಪ್ರೊಫೆಸರ್ ಆಗಿ, 2015ರಿಂದ ಪ್ರೋಫೆಸರ್ ಮತ್ತು ಅಗದತಂತ್ರ ವಿಭಾಗ ಮುಖ್ಯಸ್ಥರಾಗಿ ಬಡ್ತಿ ಪಡೆದಿದ್ದರು. 2021ರಲ್ಲಿ ಅವರ ಜೀವನ ಬಹುದೊಡ್ಡ ಕನಸು ಈಡೇರಿತು. ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡರು. ಇವರು ಅಧಿಕಾರ ಸ್ವೀಕರಿಸಿದ ಬಳಿಕ ಕಾಲೇಜಿನಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿದೆ ಎಂದು ಇವರನ್ನು ಸಮೀಪದಿಂದ ಬಲ್ಲ ಸ್ನೇಹಿತರು ಹೇಳುತ್ತಾರೆ. ದೋಳಮನೆ ವೀರಪ್ಪ ಗೌಡ-ಗೌರಮ್ಮ ದಂಪತಿಯ ಪುತ್ರ ಡಾ. ಲೀಲಾಧರ್ ಡಿ.ವಿ ಯವರು ಅತ್ಯಂತ ತಾಳ್ಮೆಯುಳ್ಳವರಾಗಿದ್ದಾರೆ. ಹೀಗಾಗಿ ಅವರನ್ನು ಯಶಸ್ಸು ಅರಸಿಕೊಂಡು ಬಂದಿದೆ ಅನ್ನೋದು ವಿಶೇಷ. ಲೀಲಾಧರ್ ಅವರ ಪತ್ನಿ ಡಾ. ಜಯವಾಣಿ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯೋಗ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಪ್ರೀತಿಯ ಸಹೋದರ ಸತೀಶ್ ಡಿ.ವಿ. ಶಿವಮೊಗ್ಗದಲ್ಲಿ ಪ್ರತಿಷ್ಠಿತ ಸೋನಿ ಕಂಪನಿಯ ಸರ್ವಿಸ್ ಪ್ರಾಂಚೈಸಿ ಮತ್ತು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

‘ಜನರಿಗೆ ಉಚಿತ…ಉಚಿತ ಅಂತ ಕೊಟ್ಟು ಈಗ ಬೆಲೆ ಏರಿಕೆಯನ್ನು ಖಚಿತ ಮಾಡಿದ್ದಾರೆ’, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾಸಕಿ ಭಾಗೀರಥಿ ಮುರುಳ್ಯ

ಇಂದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಅದ್ದೂರಿ ರೋಡ್‌ ಶೋ:ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲ್ಲಿಸ ದಂತೆ ನ.ಪಂ.ಅಧ್ಯಕ್ಷ ಮನವಿ

ಕಲ್ಮಡ್ಕ: ಸಿಡಿಲಿನ ಆರ್ಭಟಕ್ಕೆ ಮುದ್ದಾದ ಕರು ಬಲಿ, ಮನೆಯ ಸ್ವಿಚ್ ಬೋರ್ಡ್ ಗಳು ಸುಟ್ಟು ಕರಕಲು