ದೇಶ-ಪ್ರಪಂಚ

ಮಾಂಸಪ್ರಿಯರಿಗೆ ಸಿಹಿಸುದ್ದಿ..! ಮಾರುಕಟ್ಟೆಗೆ ಬರಲಿದೆ ಮಾಂಸಾಹಾರಿ ಅಕ್ಕಿ..! ವಿಜ್ಞಾನಿಗಳಿಂದ ತಯಾರಾದ ಮಾಂಸಾಹಾರಿ ಅಕ್ಕಿ,ಇನ್ನು ಬಿರಿಯಾನಿಗೆ ಮಾಂಸ ಬೇಡ ಈ ಅಕ್ಕಿಯೊಂದಿದ್ರೆ ಸಾಕು..!

ನ್ಯೂಸ್ ನಾಟೌಟ್: ಬಾಸ್ಮತಿ ರೈಸ್, ಬ್ರೌನ್ ರೈಸ್ ಇಂತ ಇನ್ನೂ ಹಲವಾರು ಬಗೆಯ ಅಕ್ಕಿಗಳ ಬಗ್ಗೆ ಕೇಳಿರ್ತೀರಿ. ಆದ್ರೆ ಮಾಂಸಹಾರಿ ಅಕ್ಕಿಯ ಬಗ್ಗೆ ಎಲ್ಲಾದ್ರು ಕೇಳಿದ್ದೀರಾ? ತಿನ್ನೋದಕ್ಕೆ ಬಹಳ ರುಚಿಯಾಗಿರೋದ್ರಿಂದ ಅನೇಕ ಜನರಿಗೆ ಮಾಂಸ ಅಂದ್ರೆ ಬಹಳ ಇಷ್ಟ.ಇದರಲ್ಲಿ ಪ್ರೋಟಿನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಅನೇಕ ಪೋಷಕಾಂಶಗಳು ಹೇರಳವಾಗಿರುತ್ತದೆ.

ಇದೀಗ ವಿಜ್ಞಾನಿಗಳು ಪೂರ್ತಿಯಾಗಿ ಮಾಂಸದ್ದೇ ರುಚಿಯನ್ನು ಹೊಂದಿರುವ ಅಕ್ಕಿಯನ್ನು ತಯಾರಿಸಿದ್ದಾರೆ. ನೀವು ಇದನ್ನು ಬಿರಿಯಾನಿಯಂತೆ ತಿನ್ನಬಹುದು. ಇದು ಇದ್ದರೆ ಮಟನ್, ಚಿಕನ್‌ನ ಅಗತ್ಯನೇ ಇಲ್ಲ. ಇದರ ರುಚಿಯೂ ಅದ್ಭುತವಾಗಿದೆ. ಇದರಲ್ಲಿ ಪ್ರೋಟಿನ್ ಮತ್ತು ಕೊಬ್ಬು ಕೂಡ ಅಧಿಕವಾಗಿದೆ ಎಂದು ಹೇಳಲಾಗಿದೆ.

ದಕ್ಷಿಣ ಕೊರಿಯಾದ ಯೋನ್ಸೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಹೈಬ್ರಿಡ್ ಅಕ್ಕಿಯನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿದ್ದಾರೆ.ಇದಕ್ಕೆ ಅನೇಕ ರೀತಿಯ ಮಾಂಸವನ್ನು ಸೇರಿಸಲಾಗಿದೆ. ಇದು ನೋಡಲು ಸಾಮಾನ್ಯ ಅಕ್ಕಿಯಂತೆ ಇದ್ದರೂ ರುಚಿ ಮಾತ್ರ ಸಾಮಾನ್ಯ ಮಾಂಸಕ್ಕಿಂತಲು ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು 11 ದಿನಗಳ ದಿನಗಳವರೆಗೆ ಸಂಗ್ರಹಿಸಲು ಯೋಗ್ಯವಾಗಿದ್ದು, ಮಾಂಸದ ಅಕ್ಕಿಯ ಉತ್ಪಾದನಾ ವಿಧಾನವು ಸರಳವಾಗಿದೆ ಎಂದು ತಿಳಿಸಿದ್ದಾರೆ. ಆದಷ್ಟು ಬೇಗ ಮಾಂಸದ ಅಕ್ಕಿ ಮಾರುಕಟ್ಟೆಗೆ ಬರಲೆಂದು ಮಾಂಸಪ್ರಿಯರು ಆಶಿಸುತ್ತಿದ್ದಾರೆ.

Related posts

ಅಪರಿಚಿತ ಬಂದೂಕುಧಾರಿಗಳಿಂದ ಮತ್ತೊಬ್ಬ ಉಗ್ರನ ನಿಗೂಢ ಹತ್ಯೆಯಾಗಿದ್ದೇಗೆ? ಭಾರತೀಯ ಗುಪ್ತಚರ ಸಂಸ್ಥೆಯ ಮೇಲೆ ಪಾಕ್ ಮಾಡಿದ ಆರೋಪವೇನು?

ಹೆರಿಗೆಯಾದ ಕೆಲವೇ ಗಂಟೆಯಲ್ಲಿ ಪರೀಕ್ಷೆ ಬರೆದ ಯುವತಿ, ವಿಶ್ರಾಂತಿಯನ್ನು ನಿರಾಕರಿಸಿ ವಿಜ್ಞಾನ ಪರೀಕ್ಷೆಯನ್ನು ಬರೆದೇ ಬಿಟ್ಟಳು

ಮೆಗ್ಗಾನ್ ಜಿಲ್ಲಾಸ್ಪತ್ರೆ ಸಿಬ್ಬಂದಿಯ ಮಹಾಯಡವಟ್ಟು..!ಸಬೀನಾ, ಕಾವ್ಯಾಳ ಮಗು ಅದಲು-ಬದಲು..!,ಮುಂದೆ ಏನಾಯ್ತು?