ನ್ಯೂಸ್ ನಾಟೌಟ್: ಮಗ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಾನೆ ಎಂದು ತಂದೆಯೇ ಮಗನನ್ನು ವಿಷ ಹಾಕಿ ಕೊಂದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವರದಿಯಾಗಿದೆ.
ಆರೋಪಿಯ ವಿಜಯ್ ಬಟ್ಟು ಟೈಲರ್ ಕೆಲಸ ಮಾಡುತ್ತಿದ್ದು, ಸೋಲಾಪುರ ನಗರದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ಸುಖ ಜೀವನ ನಡೆಸುತ್ತಿದ್ದ ಈ ಕುಟುಂಬದಲ್ಲಿ ಮಗನ ವರ್ತನೆ ಬಿರುಗಾಳಿ ಎಬ್ಬಿಸಿದೆ ಎನ್ನಲಾಗಿದೆ.
ವ್ಯಕ್ತಿನನ್ನು ತನ್ನ 14 ವರ್ಷದ ಮಗನಿಗೆ ವಿಷ ನೀಡಿ ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಮಗ ನಾಪತ್ತೆಯಾಗಿದ್ದ ಕಥೆ ಕಟ್ಟಿದ ತಂದೆ ಈಗ ಜೈಲುಪಾಲಾಗಿದ್ದು, ಬಂಧಿತ ವ್ಯಕ್ತಿಯನ್ನು ವಿಚಾರಣೆ ನಡೆಸಿದ ಪೊಲೀಸರೇ ಶಾಕ್ ಆಗಿದ್ದಾರೆ.
ಜನವರಿ 13ರಂದು ವಿಶಾಲ್ ಎಂಬ 14 ವರ್ಷದ ಬಾಲಕ ಕಾಣೆಯಾಗಿದ್ದಾನೆ ಎನ್ನುವ ದೂರು ದಾಖಲಾಗಿತ್ತು. ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸ್ರು ತನಿಖೆ ಆರಂಭಿಸಿದ್ದು, ಬಾಲಕನಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಬಾಲಕನೊಬ್ಬನ ಶವ ಪತ್ತೆಯಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಬಾಲಕನ ಶವ ಪತ್ತೆ ಬಗ್ಗೆ ವಿಶಾಲ್ ಕುಟುಂಬಸ್ಥರಿಗೆ ತಿಳಿಸಿದ್ದರು.
ಇದಾದ ಬಳಿಕ ಕುಟುಂಬದವರು ಶವವನ್ನು ತಮ್ಮ ಕಾಣೆಯಾದ ಮಗ ವಿಶಾಲ್ ಎಂದು ಗುರುತಿಸಿದ್ದಾರೆ . ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸವ ಮೊದಲು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಾಲಕ ವಿಷ ಸೇವಿಸಿಯಿಂದ ಸಾವನ್ನಪ್ಪಿದ್ದಾನೆ ಎಂದು ವರದಿ ಬಂದಿತ್ತು.
ತನ್ನ 14 ವರ್ಷದ ಮಗ ಮೊಬೈನಲ್ಲಿ ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ, ಎಷ್ಟು ಹೇಳಿದರೂ ಕೇಳುತ್ತಿಲ್ಲ, ಶಾಲೆಯಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ, ಇದರಿಂದ ಶಾಲೆಗಳಿಂದಲೂ ನಿತ್ಯ ದೂರುಗಳು ಬರುತ್ತಿದ್ದವು. ಹೀಗಾಗಿ ಮಗ ಮಗ ದಾರಿ ತಪ್ಪುತ್ತಿದ್ದಾನೆ ಎಂದು ತಿಳಿದ ತಂದೆ ಅನೇಕ ಬಾರಿ ಬುದ್ಧಿ ಹೇಳಿದ್ದಾರೆ. ಮಗ ಎಷ್ಟು ಹೇಳಿದರೂ ಕೇಳುತ್ತಿಲ್ಲ ಎಂದು ಗೊತ್ತಾದಾಗ ಆರೋಪಿ ಮಗನನ್ನೇ ಕೊಲೆ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಜನವರಿ 13 ರಂದು ಮಗನ ಜೊತೆ ತನ್ನ ದ್ವಿಚಕ್ರ ವಾಹನದಲ್ಲಿ ತುಳಜಾಪುರ ರಸ್ತೆಗೆ ಕರೆದೊಯದಿದ್ದ ತಂದೆ ತಂಪು ಪಾನೀಯ ಖರೀದಿಸಿ ಅದರಲ್ಲಿ ವಿಷ ಹಾಕಿ ಮಗನಿಗೆ ನೀಡಿದ್ದಾರೆ. ಶೀಘ್ರದಲ್ಲೇ ವಿಶಾಲ್ ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದು, ಆರೋಪಿ ವಿಜಯ್ ಬಟ್ಟು ಮಗನ ಮೃತದೇಹ ಅಲ್ಲೇ ಬಿಟ್ಟು ಮನೆಗೆ ವಾಪಸ್ ಆಗಿದ್ದಾನೆ ಎನ್ನಲಾಗಿದೆ.
ಬಾಲಕನ ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆಗೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ತಂದೆಯ ವರ್ತನೆಯಲ್ಲಿ ಅನುಮಾನ ಬಂದಿದೆ ಎನ್ನಲಾಗಿದೆ.
ತಂದೆ ವಿಜಯ್ ಬಟ್ಟು ಜೊತೆಗೆ ಹೋಗಿದ್ದ ಮಗ ವಾಪಸ್ ಬರುವಾಗ ಇರಲಿಲ್ಲ. ತಂದೆ ಜೊತೆ ಹೋದ ಮಗನೇ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿ ತಂದೆಯನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಂದೆ ವಿಜಯ್ ಬಟ್ಟು ತಾನೇ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.