ಜೀವನಶೈಲಿ

ವಿಧವೆ ಸೊಸೆಯನ್ನು ಓದಿಸಿ ನೌಕರಿ ಸಿಕ್ಕ ಬಳಿಕ ಪುನರ್‌ ವಿವಾಹ ಮಾಡಿಸಿದ ಅತ್ತೆ..! 

ಜೈಪುರ: ಒಂದೇ ಮನೆಯಲ್ಲಿ ಅತ್ತೆ-ಸೊಸೆ ಹಾವು ಮುಂಗುಸಿ ತರ ಕಚ್ಚಾಡುವುದನ್ನು ನೋಡಿದ್ದೇವೆ. ಅದೆಷ್ಟೋ ಪುರುಷರು ತಮ್ಮ ಮನೆಯಲ್ಲಿ ನೆಮ್ಮದಿ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಇದಕ್ಕೆ ವಿರೋಧ ಎಂಬಂತೆ ಇಲ್ಲೊಬ್ಬಳು ಅತ್ತೆ ಹೆತ್ತ ಮಗನ ಸಾವಿನ ನಂತರ ಸೊಸೆಯನ್ನು ಚೆನ್ನಾಗಿ ಓದಿಸಿ ಆಕೆಗೊಂದು ಉದ್ಯೋಗ ಸಿಕ್ಕ ಬಳಿಕ ಪುನರ್ ವಿವಾಹ ಮಾಡಿಸಿ ಸೈ ಎನಿಸಿಕೊಂಡಿದ್ದಾಳೆ. ಈ ಮಾದರಿ ಕಥೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜಸ್ಥಾನದಾದ್ಯಂತ ವರದಕ್ಷಿಣೆ ಸಾವುಗಳು ಮತ್ತು ಬಾಲ್ಯವಿವಾಹಗಳ ಅನೇಕ ಪ್ರಕರಣಗಳನ್ನು ಎದುರಿಸುತ್ತಿದೆ, ರಾಜಸ್ಥಾನದ ಫತೇಪುರ್ ಶೇಖಾವತಿಯಲ್ಲಿರುವ ಕಮಲಾ ದೇವಿ ಎಂಬ ಮಹಿಳೆ ಸೊಸೆಯನ್ನು ಮಗಳಂತೆ ನೋಡಿಕೊಂಡು ಕಾಳಜಿ ವಹಿಸಿದ್ದಾರೆ. ಆಕೆಯ ಕಿರಿಯ ಮಗ ಶುಭಂ ೨೦೧೬ ರಲ್ಲಿ ವಿವಾಹವಾದ ಕೆಲವು ತಿಂಗಳ ನಂತರ ಬ್ರೈನ್ ಸ್ಟ್ರೋಕ್ ನಿಂದ ಸಾವಿಗೀಡಾಗಿದ್ದ. ಆ ನಂತರ ಕಮಲಾ ದೇವಿಯು ಸೊಸೆಯಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಂತೆ ಹೇಳಿದಳು. ಆಕೆಯ ಕಾಳಜಿ , ಪ್ರೋತ್ಸಾಹದ ಪರಿಣಾಮ ಸೊಸೆ ಇತಿಹಾಸದಲ್ಲಿ ಗ್ರೇಡ್ ೧ ಟೀಚರ್ ಹುದ್ಧೆಗೆ ಅರ್ಹತೆ ಪಡೆದರು. ದೇವಿ ಸ್ವತಃ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕಿ. ಈಗ ಸೊಸೆ ಸುನೀತಾ ಪ್ರಸ್ತುತ ಚುರು ಜಿಲ್ಲೆಯ ಸರ್ದಾರ್ ನಗರದ ನೈನಾಸರ್ ಸುಮೇರಿಯಾದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐದು ವರ್ಷಗಳ ನಂತರ ದೇವಿ ತನ್ನ ಸೊಸೆಯನ್ನು ಮುಖೇಶ್ ಎಂಬ ವ್ಯಕ್ತಿಗೆ ಮದುವೆ ಮಾಡಿಸಿಕೊಟ್ಟಿದ್ದು ಆಕೆಯ ಜೀವನವನ್ನು ಸರಿಪಡಿಸಿದ್ದಾಳೆ. ಈ ಮಾದರಿ ಅತ್ತೆಯ ಕೆಲಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

Related posts

ಟಾಟಾ ಮೋಟಾರ್ಸ್ ನ ಹೊಸ ಕಾರು ಪಂಚ್ ಬಿಡುಗಡೆ, ಕಡಿಮೆ ಬೆಲೆಗೆ ಸುರಕ್ಷಿತ ಪ್ರಯಾಣ ಭರವಸೆ

Liquor Price: ರಾಜ್ಯದ ಮದ್ಯ ಪ್ರಿಯರಿಗೆ ಶಾಕ್..! ಲೋಕ ಸಭಾ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಹೆಚ್ಚಲಿದೆ ಮದ್ಯದ ದರ..!

ಅಡಿಕೆ ಬೆಳೆಗಾರರಿಗೆ ಸಂತಸ ಸುದ್ದಿ, ಈ ತಿಂಗಳಾಂತ್ಯಕ್ಕೆ ಗಗನಕ್ಕೆ ಏರಲಿದೆ ಅಡಿಕೆ ದರ..!