ಜೀವನಶೈಲಿ

ಅಡಿಕೆ ಬೆಳೆಗಾರರಿಗೆ ಸಂತಸ ಸುದ್ದಿ, ಈ ತಿಂಗಳಾಂತ್ಯಕ್ಕೆ ಗಗನಕ್ಕೆ ಏರಲಿದೆ ಅಡಿಕೆ ದರ..!

26

ಪುತ್ತೂರು: ಮಂಗಳೂರು ಚಾಲಿ ಹೊಸ ಅಡಿಕೆ ಧಾರಣೆ ನೆಗೆತವನ್ನು ಕಾಣುತ್ತಿದೆ. ಸದ್ಯದ ಟ್ರೆಂಡ್ ಮುಂದುವರಿದರೆ ಈ ತಿಂಗಳಾಂತ್ಯಕ್ಕೆ ಕೆ.ಜಿ.ಗೆ ರೂ.500 ರತ್ತ ಮುಖಮಾಡುವ ಸಾಧ್ಯತೆ ಹೆಚ್ಚಿದೆ. ಪ್ರತೀ ಸೋಮವಾರ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಧಾರಣೆ ಏರಿಕೆ ಕಾಣುತ್ತಿದೆ. ಸೋಮವಾರ ಹೊರ ಮಾರುಕಟ್ಟೆಯಲ್ಲಿ ಚಾಲಿ ಹೊಸ ಅಡಿಕೆ ಕೆ.ಜಿ.ಗೆ ರೂ. 485ಕ್ಕೆ ಖರೀದಿಯಾಗಿದೆ. ಕ್ಯಾಂಪ್ಕೋದಲ್ಲಿ ಹೊಸ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 480ಕ್ಕೆ ಇತ್ತು. ಕಳೆದ 1 ತಿಂಗಳ ಅವಧಿಯಲ್ಲಿ ಅಡಿಕೆಯ ಧಾರಣೆ ಕೆ.ಜಿಗೆ ರೂ. 35ರಷ್ಟು ಏರಿಕೆಯಾಗಿದೆ. ಮುಂದಿನ ವಾರ ಚಾಲಿ ಹೊಸ ಅಡಿಕೆಯ ಧಾರಣೆ ಇನ್ನಷ್ಟು ನೆಗೆತ ಕಾಣುವ ನಿರೀಕ್ಷೆ ವ್ಯಾಪಾರಸ್ಥರಲ್ಲಿ ಹಾಗೂ ಬೆಳೆಗಾರರಲ್ಲಿ ಮೂಡಿದೆ. ಕಳೆದ 3 ವಾರಗಳಿಂದ ಹಳೆ ಅಡಿಕೆಯ ಧಾರಣೆ ಕೆ.ಜಿ.ಗೆ ರೂ. 505 ಮತ್ತು ರೂ. 500 ರಲ್ಲಿಯೇ ಮುಂದುವರಿದಿದೆ. ಕ್ಯಾಂಪ್ಕೋದಲ್ಲಿ ಮಂಗಳವಾರ ಹೊಸ ಅಡಿಕೆಗೆ 410 – 480, ಹಳೆ ಅಡಿಕೆಗೆ 480 – 505,ಡಬಲ್ ಚೋಲ್ ‌ಗೆ 480 – 505, ಫಟೋರಗೆ 280 ರಿಂದ 390,ಉಳ್ಳಿಗಡ್ಡೆಗೆ – 150 ರಿಂದ 305,ಕರಿಗೋಟಿಗೆ – 220 ರಿಂದ 315 ರವರೆಗೆ ಇದೆ.