ಐವರ್ನಾಡು: ಇತ್ತೀಚೆಗೆ ಎಲ್ಲೆಂದರಲ್ಲಿ ಕಸ ಎಸೆಯುವ ಅವಿವೇಕಿ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ದೂರದ ಊರುಗಳಿಂದ ವಾಹನದ ಮೂಲಕ ಹಾದು ಹೋಗುವ ಜನರು ದಾರಿ ಮದ್ಯೆ ತಿಂಡಿ, ತಿನಿಸು ತಿಂದು, ಕಂಠ ಪೂರ್ತಿ ಮದ್ಯ ಕುಡಿದು ಮೋಜು ಮಸ್ತಿ ಮಾಡಿ ಅಲ್ಲಲ್ಲಿ ಕಸ ಎಸೆದು ಹೋಗುತ್ತಿರುವುದು ವಿಪರ್ಯಾಸವೇ ಸರಿ. ಹೀಗೆಯೇ ಐವರ್ನಾಡಿನಲ್ಲಿ ಕಸ ಎಸೆದು ಹೋದ ಅವಿವೇಕಿಗಳನ್ನು ಹಿಡಿದು ಐವರ್ನಾಡು ಗ್ರಾಮ ಪಂಚಾಯತ್ 5,000 ರೂ. ದುಬಾರಿ ದಂಡ ವಿಧಿಸಿದ ಘಟನೆ ನಡೆದಿದೆ.
ಜಲೈ 25 ರಂದು ಕೆಲವು ಅವಿವೇಕಿಗಳು ಬೇಂಗಮಲೆ ಪರಿಸರದಲ್ಲಿ ತ್ಯಾಜ್ಯ ತುಂಬಿದ್ದ ಬ್ಯಾಗ್ ಎಸೆದು ಹೋಗಿದ್ದಾರೆ. ಈ ವಿಷಯ ತಿಳಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ ಆರ್ ಅಲ್ಲಿ ತ್ಯಾಜ್ಯ ಬಿಸಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ 5,000 ರೂ.ದಂಡ ವಿಧಿಸಿದ್ದಾರೆ. ಅಲ್ಲದೆ ಯಾರೂ ಕಸ ಹಾಕಿದ್ದಾರೂ ಅವರ ಕೈನಿಂದಲೇ ಅದನ್ನು ವಿಲೇವಾರಿ ಮಾಡಿಸಿದ್ದಾರೆ. ಮಾತ್ರವಲ್ಲ ಕಸ ಬಿಸಾಕಿ ಹೋದ ವ್ಯಕ್ತಿಗೆ 3,000 ರೂ, ದಂಡ ವಿಧಿಸಿದ್ದಾರೆ. ಇಂತಹ ಕ್ರಮ ಪ್ರತಿಯೊಂದು ಗ್ರಾಮ ಪಂಚಾಯತ್ ಗಳಿಗೂ ಮಾದರಿಯಾಗಿದೆ. ನಮ್ಮ ಊರನ್ನು ಸ್ವಚ್ಛವಾಗಿರಿಸಿಕೊಳ್ಳಲು ಇಂತಹ ಬಿಗಿಯಾದ ಕ್ರಮ ಅಗತ್ಯವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳು ಇಂತಹ ಬಿಗಿಯಾದ ಕ್ರಮ ಅಗತ್ಯವಾಗಿ ತೆಗೆದುಕೊಂಡರೆ ಕಸ ಹಾಕುವ ದುರುಳರ ಹುಟ್ಟಡಗುವುದರಲ್ಲಿ ಅನುಮಾನವೇ ಇಲ್ಲ.