ನ್ಯೂಸ್ ನಾಟೌಟ್: ಕೇರಳದ ತ್ರಿಶೂರ್ದ ತ್ರಿಪ್ರಯಾರ್ನಲ್ಲಿ ಮದವೇರಿದ ಆನೆಯೊಂದು ಸಿಕ್ಕ-ಸಿಕ್ಕ ವಸ್ತುಗಳು ಮತ್ತು ವಾಹನಗಳ ಮೇಲೆ ದಾಳಿ ಮಾಡಿತ್ತು.
ಲಾರಿಯಿಂದ ಕೆಳಗಿಳಿಸುವಾಗ ಪಾರ್ಥಸಾರಥಿ ಎಂಬ ಆನೆ ರೊಚ್ಚಿಗೆದ್ದು ದಾಳಿ ನಡೆಸಿತ್ತು ಎಂದು ವರದಿ ತಿಳಿಸಿದೆ.(ಡಿ.15) ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ. ಆನೆ ದಾಳಿಯಿಂದಾಗಿ ಅಯ್ಯಪ್ಯ ಭಕ್ತರಿಗೆ ಸೇರಿದ್ದ ಕಾರು ಹಾಗೂ ಎರಡು ಟೆಂಪೋ ವಾಹನಗಳನ್ನು ನುಜ್ಜುಗುಜ್ಜಾಗಿವೆ ಎನ್ನಲಾಗಿದೆ.
ಅಷ್ಟೇ ಅಲ್ಲ, ಈ ಮದವೇರಿದ ಒಂಟಿ ಸಲಗ ವ್ಯಾಪಾರಸ್ಥರ ಅಂಗಡಿಯನ್ನೂ ಸಹ ಧ್ವಂಸಗೊಳಿಸಿದೆ. ಈ ಒಂಟಿ ಸಲಗನನ್ನು ಹಿಡಿಯಲು ಸ್ಥಳೀಯರು ಹರಸಾಹಸವೇ ಪಡಬೇಕಾಯಿತು. ಸುಮಾರು ಒಂದು ಗಂಟೆಯ ಬಳಿಕ ಕೊನೆಗೂ ಆನೆಯನ್ನು ಸೆರೆ ಹಿಡಿಯಲಾಯಿತು ಎನ್ನಲಾಗಿದೆ.
ಇತ್ತೀಚೆಗೆ ಕಾಡಿನಿಂದ ನಾಡಿಗೆ ಪ್ರಾಣಿಗಳ ದಾಳಿ ಹೆಚ್ಚಾಗಿದೆ, ಆದರೆ, ಇಲ್ಲಿ ನಾವು ಗಮನಿಸಬೇಕಾದದ್ದು ಕಾಡುಗಳನ್ನು ನಾವು ನಾಡು, ಪಟ್ಟಣಗಳಾಗಿ ಪರಿವರ್ತಿಸಿರುವುದು ಮತ್ತು ಸೂಕ್ತ ಆಹಾರದ ಕೊರತೆ ಈ ದಾಳಿಗಳಿಗೆ ಕಾರಣ ಎನ್ನಲಾಗಿದೆ.