ನ್ಯೂಸ್ ನಾಟೌಟ್ : ಪಂಜಾಬಿನ 16 ವರ್ಷದ ಅಜ್ನೀತ್ ಕೌರ್ ಎಂಬ ಹುಡುಗಿ ಯಾವುದೇ ತರಬೇತಿ ಇಲ್ಲದೆ ಯೂಟ್ಯೂಬ್ ಸಹಾಯದ ಮೂಲಕ ಕೊರಿಯನ್ ಭಾಷೆ ಸೇರಿದಂತೆ ಒಟ್ಟು 7 ಭಾಷೆಗಳನ್ನು ಕಲಿತಿದ್ದಾಳೆ ಎಂದು ವರದಿ ತಿಳಿಸಿದ್ದಾಳೆ.
ಕೊರೊನಾ ಲಾಕ್ ಡೌನ್ ಸಮಯದಲ್ಲಿ ಹಲವರು ಜೀವನ ಕಟ್ಟಿಕೊಂಡವರೂ ಇದ್ದಾರೆ, ಜೀವನದ ಗುರಿ ಕಳೆದುಕೊಂಡವರೂ ಇದ್ದಾರೆ. ಆದರೆ, 16 ವರ್ಷದ ಹುಡುಗಿಯೊಬ್ಬಳು ಲಾಕ್ಡೌನ್ ಸಮಯದಲ್ಲಿ ಯೂಟ್ಯೂಬ್ ಮೂಲಕ 7 ಭಾಷೆಗಳನ್ನು ಕಲಿತಿದ್ದಾಳೆ ಎನ್ನಲಾಗಿದೆ.
ಗುರುದಾಸ್ಪುರದ ಸಂತ ನಗರದ ನಿವಾಸಿ ಅಜ್ನೀತ್ ಕೌರ್(೧೬) ಯೂಟ್ಯೂಬ್ನಿಂದಲೇ 7 ಭಾಷೆಗಳಲ್ಲಿ ಜ್ಞಾನ ಪಡೆದುಕೊಂಡಿದ್ದಾಳೆ. ಕೊರಿಯಲ್ ಭಾಷೆಯನ್ನು ಕಲಿಯಲು ಪ್ರಾರಂಭಿಸಿದ ಈ ಹುಡುಗಿ ಒಂದು ಭಾಷೆಯನ್ನು ಅರ್ಥಮಾಡಿಕೊಂಡಾಗ, ಇತರ ಭಾಷೆಗಳನ್ನು ಕೂಡ ಕಲಿಯುವ ಆಸಕ್ತಿ ಹೆಚ್ಚಿತು ಎಂದು ಕೇಳಿಕೊಂಡಿದ್ದಾಳೆ.
ಈ ಮೂಲಕ 7 ಭಾಷೆಗಳಲ್ಲಿ ಸುಲಲಿತವಾಗಿ ವ್ಯವಹರಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ಇದಲ್ಲದೇ ಇತ್ತೀಚೆಗಷ್ಟೇ ದೆಹಲಿಯ ಪಂಡಿತ್ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕೊರಿಯನ್ ಭಾಷಾ ಪರೀಕ್ಷೆ ನಡೆದಿದ್ದು, ಇದರಲ್ಲಿ ಐದು ರಾಜ್ಯಗಳ ಮಕ್ಕಳು ಭಾಗವಹಿಸಿದ್ದು, ಅದರಲ್ಲಿ ಅಜ್ನೀತ್ ಪ್ರಥಮ ಸ್ಥಾನವನ್ನು ಗಳಿಸಿದ್ದಾಳೆ.
2020 ರಲ್ಲಿ ಲಾಕ್ಡೌನ್ ಸಮಯದಲ್ಲಿ ತಮ್ಮ ಮಗಳು ಯೂಟ್ಯೂಬ್ನಲ್ಲಿ ಕೊರಿಯನ್ ಭಾಷೆಯ ಮೂಲಕ ಇತರ ಭಾಷೆಗಳನ್ನು ಕಲಿಯುವ ಕಡೆ ಒಲವು ತೋರಿದ್ದಳು. ಅದರಂತೆ ಇಂದು ಅನೇಕ ಭಾಷೆಗಳನ್ನು ಕಲಿತು ಸುಲಲಿತವಾಗಿ ಮಾತನಾಡುವಾಗ ನಮಗೆ ಹೆಮ್ಮೆ ಇದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದ್ದಾರೆ.