ನ್ಯೂಸ್ ನಾಟೌಟ್ : ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ್ದ ಅರವಳಿಕೆ ಚುಚ್ಚುಮದ್ದಿನಿಂದಾಗಿ ಕಾಡಾನೆ ಕೊನೆಯುಸಿರೆಳೆದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಭೈರಾಪುರದ ದೊಡ್ಡಗೊಳ್ಳ ಎಂಬಲ್ಲಿ ನಡೆದಿದೆ.
ಪುಂಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಈ ಅಚಾತುರ್ಯ ನಡೆದಿದೆ ಎನ್ನಲಾಗಿದೆ.
ರಾತ್ರಿಯ ವೇಳೆ ಕಾರ್ಯಚಾರಣೆ, ಅರವಳಿಕೆ ಹೆಚ್ಚಿನ ಪ್ರಮಾಣದಲ್ಲಿ ನೀಡಿದ ಪರಿಣಾಮ ಕೊನೆಯುಸಿರೆಳೆದಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ, ಅವೈಜ್ಞಾನಿಕ ಕಾಡಾನೆ ಸೆರೆಯಿಂದಾಗ ಆನೆ ಬಲಿಯಾಗಿದೆ. ಕಾಡಾನೆ ಬಲಿಯಾದದ್ದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಅರಣ್ಯ ಇಲಾಖೆಯ ವಿರುದ್ಧ ಪರಿಸರವಾದಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಆನೆ ಕಾರ್ಯಪಡೆಯ ಸಿಬ್ಬಂದಿ ಕಾರ್ತಿಕ ಗೌಡ ಸೇರಿದಂತೆ ಒಂಟಿ ಸಲಗ ದಾಳಿಯಿಂದ ಮೂವರು ಕೊನೆಯುಸಿರೆಳೆದಿದ್ದರು. ಕಾಡಾನೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ನರಹಂತಕ ಕಾಡಾನೆ ಸೇರಿದಂತೆ ಮೂರು ಕಾಡಾನೆ ಸೆರೆಗೆ ಸರ್ಕಾರ ಆದೇಶ ಮಾಡಿತ್ತು.