ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಏನಿದು ಕ್ರಿಕೆಟ್ ಪ್ರೇಮಿಗಳ ಮದುವೆ..? ಮಂಟಪದಲ್ಲೇ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ಯಾರು?

ನ್ಯೂಸ್ ನಾಟೌಟ್: ಟೀಂ ಇಂಡಿಯಾ (Team India) ಹಾಗೂ ನ್ಯೂಜಿಲೆಂಡ್ (New Zealand) ನಡುವೆ ಸೆಮಿ ಫೈನಲ್ (Semi Final) ಕ್ರಿಕೆಟ್ ಪಂದ್ಯ ನಡೆದಿದ್ದು, 70 ರನ್‌ಗಳ ಅಂತರದಲ್ಲಿ ಭಾರತ ಭರ್ಜರಿ ಜಯ ಗಳಿಸಿ ವಿಶ್ವಕಪ್ (World Cup) ಫೈನಲ್‌ಗೆ ಕಾಲಿಟ್ಟಿದೆ. ಈ ನಡುವೆ ತುಮಕೂರಿನಲ್ಲಿ (Tumakuru) ಕ್ರಿಕೆಟ್ ಪ್ರೇಮಿಗಳು ತಮ್ಮ ಮದುವೆ ಮಂಟಪದಲ್ಲೇ ಬಂಧುಗಳಿಗಾಗಿ ಇಂಡೋ-ಕಿವೀಸ್ ಸೆಮಿ ಫೈನಲ್ ಮ್ಯಾಚ್ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.

ಬುಧವಾರ(ನ.೧೫) ನಡೆದ ಕ್ರಿಕೆಟ್ ಪಂದ್ಯಾಟವನ್ನು ಪಾವಗಡದ (Pavagada) ಎಸ್‌ಎಸ್‌ಕೆ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ಪ್ರದರ್ಶಿಸಲಾಯ್ತು. ಕ್ರಿಕೆಟ್ ಪ್ರೇಮಿಗಳಾದ ಸೌಂದರ್ಯ ಹಾಗೂ ಕಾರ್ತಿಕ್ ಸೆಮಿ ಫೈನಲ್ ದಿನವೇ ತಮ್ಮ ಮದುವೆ ಮಾಡಿಕೊಂಡಿದ್ದು, ಮದುವೆ ಮಂಟಪದಲ್ಲೇ ಇಂಡಿಯಾ ಮತ್ತು ನ್ಯೂಜಿಲೆಂಡ್ ಸೆಮಿ ಫೈನಲ್ ಪಂದ್ಯ ವೀಕ್ಷಿಸಿದ್ದಾರೆ. ವಧು ಹಾಗೂ ವರ ಮದುವೆ ಮಂಟಪದಲ್ಲಿ ಇಂಡೋ-ಕಿವೀಸ್ ಸೆಮಿ ಫೈನಲ್ ವೀಕ್ಷಣೆ ಮಾಡಿದ್ದು, ಆರತಕ್ಷತೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರಿಗಾಗಿ ಎಲ್‌ಇಡಿ (LED) ಮೂಲಕ ಪಂದ್ಯವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮದುವೆಗೆಂದು ಬಂದವರಿಗೆ ಆರ್ಕೆಸ್ಟ್ರಾ ಜೊತೆ ಮ್ಯಾಚ್ ನೋಡಲು ಎಲ್‌ಇಡಿ ವ್ಯವಸ್ಥೆ ಕಲ್ಪಿಸಿದ್ದು, ಮದುವೆ ಆರತಕ್ಷತೆಯಲ್ಲಿ ಭರ್ಜರಿ ಊಟದೊಂದಿಗೆ ಪಂದ್ಯ ವೀಕ್ಷಣೆ ಮಾಡಿ ಜನ ಸಂತಸ ಪಟ್ಟಿದ್ದಾರೆ. ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸುತ್ತಿದ್ದಂತೆ ಮದುವೆ ಮಂಟಪದಲ್ಲಿ ಸಂಭ್ರಮಾಚರಣೆ ಜೋರಾಗಿ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

(story cr: public tv kannada)

Related posts

ಆಸ್ಪತ್ರೆಯಲ್ಲಿ ವೀಲ್‌ ಚೇರ್‌ ಕೊಡೊಕೆ ನಿರಾಕರಣೆ..! ಮಗನನ್ನು ಸ್ಕೂಟರ್‌ನಲ್ಲಿ 3ನೇ ಮಹಡಿಗೆ ಕರೆದೊಯ್ದ ತಂದೆ! ಇಲ್ಲಿದೆ ವೈರಲ್‌ ವಿಡಿಯೋ

ಗಂಡನ ಮರ್ಮಾಂಗವನ್ನು ಹಿಚುಕಿ ಕೊಂದ ಪತ್ನಿ..! ಹಲವು ದಿನಗಳ ಬಳಿಕ ಬಯಲಾದದ್ದೇಗೆ ಸಾವಿನ ರಹಸ್ಯ..? ಇಲ್ಲಿದೆ ಸಂಪೂರ್ಣ ಕಹಾನಿ

ರಸ್ತೆಯಲ್ಲೇ ಯೋಗ ಮಾಡಿದ ಕಟ್ಟಿಗೆ ಆಯುವ ಅಜ್ಜಿ, 72ರ ಇಳಿ ವಯಸ್ಸಿನ ಅಜ್ಜಿಯ ಬಟರ್‌ ಫ್ಲೈ ಫೋಸ್‌ ಗೆ ಜನ ಫಿದಾ..!