ಸುಳ್ಯ: ಇಲ್ಲಿನ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಹತ್ತನೇ ತರಗತಿಯ ವಿದ್ಯಾರ್ಥಿ, ಬಳ್ಪ ಗ್ರಾಮದ ಪಟೋಲಿಯ ಆಶ್ಲೇಷ್ ಆರ್ ವಿ ವಲ್ಡ್ ರೆಕಾರ್ಡ್ ಬರೆದು ದಾಖಲೆ ಮಾಡಿದ್ದಾರೆ.
ತನ್ನ ಕೈಯ ತೋರು ಬೆರಳನ್ನು ಮಡಚಿ ನಂತರ 32 ನಿಮಿಷಗಳ ಕಾಲ ಆ ಸ್ಥಿತಿಯಲ್ಲೇ ಇದ್ದು ದಾಖಲೆ ನಿರ್ಮಿಸಿದ್ದಾರೆ. ಇವರು ಬಳ್ಪ ಗ್ರಾಮದ ಪಟೋಳಿಯ ರಮೇಶ್ ಭಟ್ ಮತ್ತು ವೀಣಾ ಸಾವಿತ್ರಿ ದಂಪತಿಗಳ ಪುತ್ರರಾಗಿದ್ದಾರೆ. ಈತನ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.