ಕರಾವಳಿ

“ಪರಶುರಾಮ ಪ್ರತಿಮೆ ನಿರ್ಮಿಸಿ ತಪ್ಪು ಮಾಡಿದೆ” , ರಾಜಕೀಯ ದ್ವೇಷದಿಂದ ಬಡ ಕಲಾವಿದನ ಜೀವನ ಅತಂತ್ರ, ಸುಳ್ಳು ಅಪಪ್ರಚಾರ ಮಾಡಿದ್ರೆ ಯಾರಿಗೆ ಲಾಭ..?

ನ್ಯೂಸ್ ನಾಟೌಟ್: ಕಾರ್ಕಳದ ಪರಶುರಾಮನ ಮೂರ್ತಿಯೇ ನಕಲಿ ಅನ್ನೋ ಸುಳ್ಳು ಸುದ್ದಿ ಹರಡುವ ಮೂಲಕ ಷಡ್ಯಂತ್ರ ನಡೆಯುತ್ತಿದೆಯಾ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಈ ಬೆನ್ನಲ್ಲೇ ಪರಶುರಾಮನ ಕಂಚಿನ ಪ್ರತಿಮೆಯ ಬಗ್ಗೆ ಆರೋಪ ಪ್ರತ್ಯಾರೋಪ ಮುಂದುವರಿದಿದೆ. ಹೌದು, ರಾಜಕೀಯವಾಗಿ ಈ ವಿಚಾರ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದನ್ನು ಬೇಕೆಂದೇ ಮಾಡುತ್ತಿದ್ದಾರೆ ಅನ್ನುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ.

ಪ್ರತಿಮೆಯ ಬಗ್ಗೆ ಶಿಲ್ಪಿ ಹೇಳಿದ್ದೇನು?

ಪರಶುರಾಮ ಕಂಚಿನ ಪ್ರತಿಮೆಯ ಬಗ್ಗೆ ಪ್ರತಿಮೆಯನ್ನು ನಿರ್ಮಿಸಿದ ಕಲಾವಿದ ಮನಬಿಚ್ಚಿ ಮಾತನ್ನಾಡಿದ್ದಾರೆ. ನಾನೊಬ್ಬ ಕಲಾವಿದ, ಈ ರೀತಿ ಊಹಾಪೋಹ ಎಬ್ಬಿಸೋದ್ರಿಂದ ನನ್ನ ಮುಂದಿನ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಅವರು ಏನಂದ್ರು ನೀವೆ ನೋಡಿ..

ಅಪಪ್ರಚಾರ ಹಿಂದೆ ಯಾರಿಗೆ ಲಾಭ ಆಗುತ್ತದೆ ಅನ್ನುವುದರ ಕುರಿತೂ ವಿಶ್ಲೇಷಣೆ ನಡೆಯುತ್ತಿದೆ. ಈ ಪ್ರಕಾರವಾಗಿ ನೋಡುವುದಾದರೆ ಸುನಿಲ್ ಕುಮಾರ್ ಅವರನ್ನು ಟಾರ್ಗೆಟ್ ಮಾಡಿಯೇ ಸಂಚು ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಹೌದು, ಥೀಂ ಪಾರ್ಕ್ ಭವಿಷ್ಯದಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಲಿದೆ, ಅದರಲ್ಲೂ ಬಹುಮುಖ್ಯವಾಗಿ ಇದು ಬಿಜೆಪಿ ಆಡಳಿತಾವಧಿಯಲ್ಲಿ ಆಗಿದೆ. ಇದನ್ನು ಸಹಿಸಿಕೊಳ್ಳಲಾಗದೇ ಇದನ್ನು ಅರ್ಧಕ್ಕೆ ನಿಲ್ಲಿಸಿ ಯೋಜನೆಯನ್ನು ಕಾಂಗ್ರೆಸ್ ಕಾಲದಲ್ಲಿ ಪೂರ್ಣಗೊಳಿಸಿದ್ದೇವೆಂದು ಹೇಳಿಕೊಳ್ಳಲು ಅಪಪ್ರಚಾರದ ಹಿಂದಿನ ಹುನ್ನಾರವಾಗಿದೆ ಎಂದು ಹೇಳಲಾಗ್ತಿದೆ.

ಪರಶುರಾಮ ತುಳುನಾಡಿನ ಸಂಸ್ಕೃತೀಯ ಪ್ರತೀಕ. ಅಂತಹ ಸತ್‌ ಚಾರಿತ್ರ್ಯ ಹಿನ್ನೆಲೆಯುಳ್ಳ ಪೌರಾಣಿಕ ನಾಯಕ ಕಂಚಿನ ಪ್ರತಿಮೆಯಲ್ಲಿ ಯಾವ ಪಕ್ಷಗಳು ರಾಜಕೀಯ ಮಾಡಿದಿರಲಿ. ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಸಮಾಜದ ಮುಂದಿಟ್ಟು ಚರ್ಚಿಸಲಿ, ನಿಮಗೆ ಈ ಸ್ಟೋರಿ ಬಗ್ಗೆ ಏನು ಅನ್ನಿಸುತ್ತೆ ಅನ್ನೋದನ್ನು ಕಾಮೆಂಟ್ ಮಾಡಿ ತಿಳಿಸಿ, ನಮಸ್ಕಾರ..ಧನ್ಯವಾದಗಳು..

Related posts

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದರಿಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2023 ಪ್ರಧಾನ

ಹಾಸನ ಮೂಲದ ವೃದ್ದೆಗೆ ನೆರವಾದ ಕೊಕ್ಕಡದ ಯುವಕರು,ಮನೆಯಿಂದ ತಪ್ಪಿಸಿಕೊಂಡು ಬಂದಿದ್ದ ಅಜ್ಜಿ

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಸಿ.ಎಂ.ಭೇಟಿ, ದೇವರ ದರ್ಶನ ಪಡೆಯಲಿರುವ ಬೊಮ್ಮಾಯಿ