ನ್ಯೂಸ್ ನಾಟೌಟ್: ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಮ್ಮೆ ಭಾರತದ ಕೀರ್ತಿಯನ್ನ ಮುಗಿಲೆತ್ತರಕ್ಕೆ ಹಬ್ಬಿಸಿದೆ. ಇಂದು(ಅ.೨೧) ಎಲ್ಲವೂ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಕಾರ್ಯದಲ್ಲಿ ಇಸ್ರೋ ಗ್ಯಾಂಡ್ ಸಕ್ಸಸ್ ಕಂಡಿದೆ.
ಇಸ್ರೋ ಮಾನವಸಹಿತ ಗಗನಯಾನ (Gaganyaan Mission) ಯೋಜನೆ ಗೆಲ್ಲಿಸುವ ಸಿದ್ಧತೆ ಭಾಗವಾಗಿ ಇಂದು ಮಹತ್ವದ ಪರೀಕ್ಷೆ ಕೈಗೊಂಡಿತ್ತು. ಅಷ್ಟಕ್ಕೂ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ನಡೆಸಿದ, ಇಂದಿನ ಗಗನಯಾನದ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ಪ್ರಯೋಗ ಸಕ್ಸಸ್ ಆಗಿದೆ.
‘ಇಸ್ರೋ’ ವಿಜ್ಞಾನಿಗಳು ಉಡಾವಣೆಗೆ ಮುಂದಾದ ವೇಳೆ, ಕೆಲ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ತಾಂತ್ರಿಕ ದೋಷ ಕಾರಣ, ಪರೀಕ್ಷಾರ್ಥ ಪ್ರಯೋಗ ಕೆಲ ಸಮಯ ತಡವಾಗಿತ್ತು. ಆದರೂ ತಾಂತ್ರಿಕ ದೋಷ ಸರಿಪಡಿಸಿ, ಇಂದು ಬೆಳಗ್ಗೆ ಸರಿಯಾಗಿ 10 ಗಂಟೆ ವೇಳೆಗೆ TV-D1 ರಾಕೆಟ್ ಉಡಾವಣೆ ಮಾಡಿತ್ತು .
ಇನ್ನು ಉಡಾವಣೆ ಬಳಿಕ, ಯಶಸ್ವಿಯಾಗಿ ಹಾರಾಟ ನಡೆಸಿದ ಗಗನನೌಕೆ ಸೇಫ್ ಲ್ಯಾಂಡಿಂಗ್ ಆಗಿದೆ ಎಂದು ಇಸ್ರೋ ತಿಳಿಸಿದೆ. ಅಂದಹಾಗೆ, ಬೆಳಗ್ಗೆ 8.45ಕ್ಕೆ ಮಾನವ ರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದರು. ಅದಕ್ಕೂ ಮೊದಲು 8.30ಕ್ಕೆ ಈ ಸಮಯ ಫಿಕ್ಸ್ ಆಗಿತ್ತು.
ಆದ್ರೆ ದಿಢೀರ್ ಸಮಯ ಬದಲಾವಣೆ ಮಾಡಲಾಗಿತ್ತು. ಈ ಸಮಯ ಬದಲಾದ ನಂತರ ಕೊನೇ ಕ್ಷಣದಲ್ಲಿ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತ್ತೆ ಕೆಲ ಕಾಲ ಸ್ಥಗಿತ ಮಾಡಿದ್ದರು. ಕೊನೆಗೆ ಎಲ್ಲ ತಾಂತ್ರಿಕ ದೋಷ ಸರಿಪಡಿಸಿದ ಇಸ್ರೋ ವಿಜ್ಞಾನಿಗಳು, ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದರು.
ಗಗನಯಾನದ ಸಮಯದಲ್ಲಿ ಗಗನಯಾತ್ರಿಗಳು ಕುಳಿತುಕೊಳ್ಳುವ ಕ್ರ್ಯೂ ಸುಮಾರು 17 ಕಿ.ಮೀ. ಎತ್ತರದಲ್ಲಿ ಬೇರೆಯಾಗಿಸುವ ಪ್ಲ್ಯಾನ್ ಇತ್ತು. ಪ್ರಕ್ರಿಯೆ ನಂತರ ಪ್ಯಾರಾಚ್ಯೂಟ್ ತೆರೆಯಲಿದೆ, ಬಳಿಕ ನಿಧಾನವಾಗಿ ಕ್ರ್ಯೂ ಮಾಡ್ಯೂಲ್ ಅನ್ನ ಸಮುದ್ರದ ಮೇಲೆ ಇಳಿಸುತ್ತೇವೆ ಎಂದು ಇಸ್ರೋ ಮಾಹಿತಿ ನೀಡಿತ್ತು. ಇದೀಗ ಎಲ್ಲವೂ ಅಂದುಕೊಂಡಂತೆ ನಡೆದಿದೆ ಎನ್ನಲಾಗಿದೆ.